Publish Date: Tue, 18 May 2021 (12:39 IST)
Updated Date: Tue, 18 May 2021 (12:40 IST)
ಬೆಂಗಳೂರು: ಅಜ್ಜಿಯೊಬ್ಬಳು ಆಟವಾಡುವ ವಿಡಿಯೋ ಒಂದನ್ನು ಪ್ರಕಟಿಸಿದ ಅಭಿಮಾನಿಗೆ ಕಿಚ್ಚ ಸುದೀಪ್ ಮನಸೋತು ಪ್ರತಿಕ್ರಿಯೆ ನೀಡಿದ್ದಾರೆ.
ಇಳಿವಯಸ್ಸಿನ ತನ್ನ ಅಜ್ಜಿ ಬಾಲ್ ಸ್ಟ್ರೈಕಿಂಗ್ ಮಾಡುವ ವಿಡಿಯೋವನ್ನು ಅಭಿಮಾನಿಯೊಬ್ಬರು ಪ್ರಕಟಿಸಿದ್ದರು. ಈ ಇಳಿವಯಸ್ಸಿನಲ್ಲೂ ಅಷ್ಟು ಉತ್ಸಾಹದಲ್ಲಿ ಸೀರೆ ಉಟ್ಟುಕೊಂಡು, ಮಾಸ್ಕ್ ಧರಿಸಿ ಅಜ್ಜಿ ಆಡುವುದನ್ನು ನೋಡಿದ ಕಿಚ್ಚ ಕ್ಲೀನ್ ಬೋಲ್ಡ್ ಆಗಿದ್ದಾರೆ.
ಇದು ಜೀವನದ ಪರಿಪೂರ್ಣತೆ ಎಂದರೆ, ಸಂತೋಷ ಎಂದರೆ ಇದು, ಶಕ್ತಿ ಎಂದರೆ ಇದು. ಇದುವೇ ನಮಗೆ ಮಾದರಿ. ಆಕೆಗೆ ಇನ್ನಷ್ಟು ಆಯುರಾರೋಗ್ಯ ಸಿಗಲಿ ಎಂದು ಸುದೀಪ್ ಮನತುಂಬಿ ಹಾರೈಸಿದ್ದಾರೆ.