Select Your Language

Notifications

webdunia
webdunia
webdunia
webdunia

ಕೊರೋನಾ ನಿಯಮ ಮುರಿದಿದ್ದಕ್ಕೆ ಮಾಲಿಕನ ಜೊತೆ ನಾಯಿಯೂ ಅರೆಸ್ಟ್

ಅಪರಾಧ ಸುದ್ದಿಗಳು
ಇಂಧೋರ್ , ಗುರುವಾರ, 6 ಮೇ 2021 (09:40 IST)
ಇಂಧೋರ್: ಕೊರೋನಾ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ದೇಶದಲ್ಲಿ ನಿಯಮಾವಳಿಗಳನ್ನೂ ಬಿಗಿಗೊಳಿಸಲಾಗುತ್ತಿದೆ. ಈ ನಡುವೆ ಇಂಧೋರ್ ನಲ್ಲಿ ನಿಯಮ ಮುರಿದ ತಪ್ಪಿಗೆ ಮಾಲಿಕನ ಜೊತೆ ನಾಯಿಯೂ ಅರೆಸ್ಟ್ ಆಗಿದೆ.


ಕರ್ಫ್ಯೂ ಸಂದರ್ಭದಲ್ಲಿ ಯಾರೂ ಅನವಶ್ಯಕವಾಗಿ ಮನೆಯಿಂದ ಹೊರಬರುವಂತಿಲ್ಲ. ಆದರೆ ಮಾಲಿಕ ನಾಯಿಯನ್ನು ಕರೆದುಕೊಂಡು ವಾಕಿಂಗ್ ಹೋಗುತ್ತಿದ್ದರು.

ಅದೇ ವೇಳೆ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಇವರಿಬ್ಬರೂ ಸಿಕ್ಕಿಬಿದ್ದಿದ್ದರು. ಹೀಗಾಗಿ ತಕ್ಷಣವೇ ಮಾಲಿಕನ ವಿರುದ್ಧ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಿ ಅರೆಸ್ಟ್ ಮಾಡುವಾಗ ನಾಯಿಯನ್ನೂ ಜೊತೆಗೇ ಕರೆದೊಯ್ದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾದಿಂದಾಗಿ ಶೇ.60 ಭಾರತೀಯರ ಕತೆ ಹೀಗಾಗಿದೆ