Select Your Language

Notifications

webdunia
webdunia
webdunia
webdunia

ನಕಲಿ ರೆಮ್ ಡಿಸೀವರ್ ಔಷಧ ಮಾರುತ್ತಿದ್ದವರ ಸೆರೆಹಿಡಿದ ಪೊಲೀಸರು

ನಕಲಿ ರೆಮ್ ಡಿಸೀವರ್ ಔಷಧ ಮಾರುತ್ತಿದ್ದವರ ಸೆರೆಹಿಡಿದ ಪೊಲೀಸರು
ನವದೆಹಲಿ , ಭಾನುವಾರ, 2 ಮೇ 2021 (09:29 IST)
ನವದೆಹಲಿ: ಕೊರೋನಾ ರೋಗಿಗಳಿಗೆ ಅತೀ ಅಗತ್ಯವಾದ ರೆಮ್ ಡಿಸೀವರ್ ಇಂಜಕ್ಷನ್ ನ್ನು ನಕಲಿಯಾಗಿ ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ದೆಹಲಿ ಪೊಲೀಸರು ಸೆರೆಹಿಡಿದಿದ್ದಾರೆ.


ಉತ್ತರಾಖಂಡ ಮೂಲದ ಬಿ ಫಾರ್ಮ್ ಪದವೀಧರರೂ ಈ ಜಾಲದಲ್ಲಿ ಸೇರಿದ್ದಾರೆ. ನಕಲಿ ರೆಮ್ ಡಿಸೀವರ್ ಇಂಜಕ್ಷನ್ ಔಷಧವನ್ನು 6 ಸಾವಿರ ರೂ.ಗಳಿಂದ 10 ಸಾವಿರ ರೂ.ಗಳವರೆಗೆ ಕಾಳ ಸಂತೆಯಲ್ಲಿ ಮಾರುತ್ತಿದ್ದರು. ಈ ಸಂಬಂಧ ಒಟ್ಟು ಏಳು ಮಂದಿಯನ್ನು ಬಂಧಿಸಲಾಗಿದೆ.

ಇವರು ದೇಶದ ಇನ್ನೂ ಹಲವೆಡೆ ನಕಲಿ ಔಷಧಿ ಮಾರಾಟ ಮಾಡಿರುವ ಶಂಕೆಯಿದೆ. ಈ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತೀಯ ಪ್ರಯಾಣಿಕರಿಗೆ ಅಮೆರಿಕಾದಿಂದಲೂ ನಿರ್ಬಂಧ