Select Your Language

Notifications

webdunia
webdunia
webdunia
webdunia

ಶೀಲಕೆಡಿಸಿದ ಆನ್ ಲೈನ್ ಗೆಳೆಯನಿಂದ ಯುವತಿಗೆ ಬ್ಲ್ಯಾಕ್ ಮೇಲ್

ಅಪರಾಧ ಸುದ್ದಿಗಳು
ಮುಂಬೈ , ಸೋಮವಾರ, 17 ಮೇ 2021 (10:32 IST)
ಮುಂಬೈ: ಆನ್ ಲೈನ್ ಮೂಲಕ ಪರಿಚಯವಾದ ಯುವಕನಿಂದ ಮಾನಭಂಗಕ್ಕೀಡಾದ ಯುವತಿ ಈಗ ತನಗೆ ಆತ ಬೆದರಿಕೆ ಹಾಕುತ್ತಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾಳೆ.


ಆನ್ ಲೈನ್ ಮೂಲಕ 2018 ರಲ್ಲಿ ಯುವಕನ ಪರಿಚಯವಾಗಿತ್ತು. ಕೊನೆಗೆ ಸ್ನೇಹ ಗಾಢವಾಗಿ ಯುವಕ ಮನೆಯಲ್ಲಿ ಸಮಸ್ಯೆಯಾಗಿದೆಯೆಂದು ಸುಳ್ಳು ಹೇಳಿ ಯುವತಿಯನ್ನು ತನ್ನ ಮನೆಗೆ ಕರೆಸಿಕೊಂಡಿದ್ದ.

ಬಳಿಕ ಚಹಾದಲ್ಲಿ ಮತ್ತು ಬರಿಸುವ ಔಷಧ ಬೆರೆಸಿ ಆಕೆಯ ಮೇಲೆ ಮಾನಭಂಗ ಮಾಡಿದ್ದ. ಈ ವೇಳೆ ತನ್ನ ಕೃತ್ಯವನ್ನು ವಿಡಿಯೋ ಮಾಡಿಟ್ಟುಕೊಂಡಿದ್ದ. ಕಳೆದ ಮೂರು ವರ್ಷಗಳಿಂದ ಈತ ತಾನು ಹೇಳಿದಂತೆ ಕೇಳದೇ ಹೋದರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂದು ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ಕ-ತಂಗಿಯನ್ನು ಮದುವೆಯಾದ ಉಮಾಪತಿ ಅರೆಸ್ಟ್