Publish Date: Wed, 26 Oct 2022 (08:50 IST)
Updated Date: Wed, 26 Oct 2022 (09:13 IST)
ಮುಂಬೈ: 12 ವರ್ಷದ ಅಪ್ರಾಪ್ತೆಯನ್ನು ಹಿಂಬಾಲಿಸಿ ಚುಡಾಯಿಸಿ 24 ವರ್ಷದ ಯುವಕನನ್ನು ಬಾಲಕಿಯ ತಂದೆ ಅಪಹರಿಸಿ ಹಲ್ಲೆ ನಡೆಸಿದ ಘಟನೆ ನಡೆದಿದೆ.
12 ವರ್ಷದ ಬಾಲಕಿಯನ್ನು ಚುಡಾಯಿಸಿ ಯುವಕ ಕಿರುಕುಳ ನೀಡಿದ್ದ. ಈ ಬಗ್ಗೆ ಮನೆಯಲ್ಲಿ ಬಾಲಕಿ ತಂದೆಗೆ ದೂರು ಹೇಳಿದ್ದಳು. ಇದರಿಂದ ಸಿಟ್ಟಿಗೆದ್ದ ತಂದೆ ತನ್ನ ಮತ್ತೊಬ್ಬ ಗೆಳೆಯನ ಜೊತೆ ಸೇರಿಕೊಂಡು ಯುವಕನನ್ನು ಅಪಹರಿಸಿದ್ದಾರೆ.
ಬಳಿಕ ಅಜ್ಞಾತ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ. ಇದೀಗ ಪೊಲೀಸರು ತಂದೆ ಮತ್ತು ಸ್ನೇಹಿತನ ಮೇಲೆ ಅಪಹರಣ, ಹಲ್ಲೆ ಪ್ರಕರಣ ದಾಖಲಿಸಿದರೆ, ಯುವಕನ ಮೇಲೆ ಚುಡಾಯಿಸಿ ಕಿರುಕುಳ ನೀಡಿದ ಆರೋಪದಲ್ಲಿ ಕೇಸ್ ಜಡಿದಿದ್ದಾರೆ.
-Edited by Rajesh Patil