ಕಾನ್ಪುರ: ಪತ್ನಿಯನ್ನು ಗೆಳೆಯನ ಬಳಿ ಅತ್ಯಾಚಾರ ಮಾಡಿಸಿದ ಪತಿ ಆ ಘಟನೆಯ ವಿಡಿಯೋ ಚಿತ್ರೀಕರಿಸಿ ವೈರಲ್ ಮಾಡಿರುವ ಹೇಯ ಕೃತ್ಯ ಉತ್ತರ ಪ್ರದೇಶದಲ್ಲಿ ನಡೆದಿದೆ.
ದಂಪತಿಗೆ ಮಕ್ಕಳಿರಲಿಲ್ಲ. ಈ ವಿಚಾರಕ್ಕೆ ಗಂಡ ಹೆಂಡತಿಗೆ ಕಿರುಕುಳ ನೀಡುತ್ತಿದ್ದ. ಹಾಗಿದ್ದರೂ ಇದನ್ನು ಹೆಂಡತಿ ಮೌನವಾಗಿ ಸಹಿಸಿಕೊಂಡಿದ್ದಳು.
ಆದರೆ ಗಂಡ ಈ ಬಾರಿ ಮನೆಗೆ ತನ್ನ ಗೆಳೆಯನೊಬ್ಬನನ್ನು ಕರೆದುಕೊಂಡು ಬಂದು ಹೆಂಡತಿ ಮೇಲೆ ಅತ್ಯಾಚಾರ ಮಾಡಿಸಿದ್ದ. ಈ ಘಟನೆಗಳನ್ನು ಚಿತ್ರೀಕರಿಸಿ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾರೆ. ಬಳಿಕ ಜೀವ ಬೆದರಿಕೆ ಹಾಕಿ ಇಬ್ಬರೂ ಪರಾರಿಯಾಗಿದ್ದರು. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ.
-Edited by Rajesh Patil