Publish Date: Fri, 21 Oct 2022 (21:07 IST)
Updated Date: Fri, 21 Oct 2022 (21:20 IST)
ಬೆಂಗಳೂರಿನಲ್ಲಿ ಲೋಕಾಯುಕ್ತ ಪೊಲೀಸರು ಬೆಳ್ಳಂಬೆಳಿಗ್ಗೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಗುತ್ತಿಗೆದಾರರ ಬಳಿ 50 ಸಾವಿರ ಲಂಚ ಪಡೆಯುತ್ತಿದ್ದ ಬೆಸ್ಕಾಂ ಅಧಿಕಾರಿ AE ಯನ್ನು ಸೆರೆ ಹಿಡಿದಿದ್ದಾರೆ. ಬೆಂಗಳೂರು ಬಿಳೇಕಹಳ್ಳಿ ಬೆಸ್ಕಾಂ ಇಲಾಖೆಯ AE ನಾಗರಾಜ್ ಲೋಕಾಯುಕ್ತ ಬಲೆ ಬಿದ್ದಿದ್ದಾನೆ. ಆರ್.ಆರ್ ನಗರ ಮನೆ ಹತ್ತಿರ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಲೋಕಾಯುಕ್ತ ಎಸ್.ಪಿ ಆಶೋಕ್ ನೇತೃತ್ವದ ತಂಡ ದಾಳಿ ನಡೆಸಿದ್ದಾರೆ. ಮಂಜೂರಾದ ಕೆಲಸಕ್ಕೆ ಎಕ್ಸಿಕ್ಯೂಟ್ ಮಾಡುವುದಕ್ಕೆ ಹಣಕ್ಕೆ ನಾಗರಾಜ್ ಡಿಮ್ಯಾಂಡ್ ಮಾಡಿದ್ದಾರೆ. ಈ ಹಿನ್ನೆಲೆ ಅಧಿಕಾರಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.