ಪಾಟ್ನಾ: ಪರೀಕ್ಷೆಗೆ ಕಾಪಿ ಚೀಟಿ ಕೊಂಡೊಯ್ದಿದ್ದ ಹುಡುಗನಿಗೆ ಅದುವೇ ತನ್ನ ಪ್ರಾಣಕ್ಕೆ ಕುತ್ತಾಗುತ್ತದೆ ಎಂದು ಕಲ್ಪನೆಯೂ ಇರಲಿಲ್ಲ.
12 ವರ್ಷದ ಬಾಲಕ ದಯಾ ಕುಮಾರ್ ಎಂಬಾತ ಪರೀಕ್ಷೆ ಹಾಲ್ ಗೆ ಕಾಪಿ ಚೀಟಿ ತೆಗೆದುಕೊಂಡು ಹೋಗಿದ್ದ. ಅದೇ ತರಗತಿಯಲ್ಲಿ ಆತನ ಸಹೋದರಿಯೂ ಪರೀಕ್ಷೆ ಬರೆಯುತ್ತಿದ್ದಳು. ಪರೀಕ್ಷೆ ವೇಳೆ ತನ್ನ ತಂಗಿಗೆ ಸಹಾಯವಾಗಲೆಂದು ಕಾಪಿ ಚೀಟಿಯನ್ನು ಆಕೆಯತ್ತ ಎಸೆದಿದ್ದ.
ಆದರೆ ದುರದೃಷ್ಟವಶಾತ್ ಆ ಚೀಟಿ ಇನ್ನೊಬ್ಬ ಹುಡುಗಿಯ ಬಳಿ ಬಿತ್ತು. ಇದನ್ನು ನೋಡಿ ಆ ಹುಡುಗಿ ಅದು ಲವ್ ಲೆಟರ್ ಎಂದು ತಪ್ಪಾಗಿ ತಿಳಿದು ತನ್ನ ಮನೆಯವರಿಗೆ ದೂರು ನೀಡಿದ್ದಾಳೆ. ಮನೆಯವರು ಬಾಲಕನನ್ನು ಕೊಲೆಯೇ ಮಾಡಿದ್ದಾರೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.
-Edited by Rajesh Patil