Publish Date: Sat, 15 Oct 2022 (08:30 IST)
Updated Date: Sat, 15 Oct 2022 (08:57 IST)
ಚೆನ್ನೈ: ಮಗಳು ಕೊಲೆಗೀಡಾದ ಆಘಾತದಲ್ಲಿ ತಂದೆ ಹೃದಯಾಘಾತದಿಂದ ಸಾವಿಗೀಡಾದ ಘಟನೆ ಚೆನ್ನೈನಲ್ಲಿ ನಡೆದಿದೆ.
,ಮೊನ್ನೆಯಷ್ಟೇ 20 ವರ್ಷದ ಯುವತಿಯನ್ನು ಪುಂಡನೊಬ್ಬ ಚಲಿಸುತ್ತಿರುವ ರೈಲಿಗೆ ನೂಕಿ ಕೊಲೆ ಮಾಡಿದ್ದ. ವಿಷಯ ತಿಳಿದ ತಂದೆ ಎದೆನೋವಿಗೊಳಗಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದರು.
ಇದೀಗ ತಂದೆಯೂ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಆರೋಪಿ ಸತೀಶ್ ಕೆಲವು ಸಮಯದಿಂದ ಯುವತಿಯನ್ನು ಪ್ರೀತಿಸುವಂತೆ ಬೆನ್ನು ಬಿದ್ದಿದ್ದ. ಆಕೆ ನಿರಾಕರಿಸಿದ್ದಕ್ಕೆ ಸಿಟ್ಟಿನಲ್ಲಿ ಕೊಲೆ ಮಾಡಿದ್ದ. ಇದೀಗ ಪೊಲೀಸರು ವಿಶೇಷ ತಂಡ ರಚಿಸಿ ಆರೋಪಿಯನ್ನು ಸೆರೆ ಹಿಡಿದಿದ್ದಾರೆ.
-Edited by Rajesh Patil