Publish Date: Sun, 09 Jan 2022 (15:32 IST)
Updated Date: Sun, 09 Jan 2022 (19:35 IST)
ನವದೆಹಲಿ : ರಿಲಯನ್ಸ್ ನ್ಯೂಯಾರ್ಕ್ನ ಐಷಾರಾಮಿ ಹೋಟೆಲ್ ಮ್ಯಾಂಡರಿನ್ ಓರಿಯಂಟಲ್ ಅನ್ನು 735 ಕೋಟಿ ರೂ. ಗೆ ಖರೀದಿಸಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಭಾರತದಲ್ಲಿಯೇ ಅತೀ ದೊಡ್ಡ ಕಾರ್ಪೊರೇಟ್ ಸಂಸ್ಥೆಯಾಗಿದೆ. ಈ ಸಂಸ್ಥೆ ಹೆಚ್ಚು ಆದಾಯ, ಲಾಭ ಮತ್ತು ಮಾರುಕಟ್ಟೆ ಮೌಲ್ಯದ ಮೂಲಕ ಭಾರತದಲ್ಲಿ ಅತಿದೊಡ್ಡ ಸಂಸ್ಥೆಯಾಗಿದೆ.
ಪ್ರಸ್ತುತ ರಿಲಯನ್ಸ್ ಕೊಲಂಬಸ್ ಸೆಂಟರ್ ಕಾರ್ಪೊರೇಷನ್, ಕೇಮನ್ ದ್ವೀಪಗಳ ಸಂಪೂರ್ಣ ಷೇರು ಬಂಡವಾಳವನ್ನು 98.15 ಮಿಲಿಯನ್(735 ಕೋಟಿ) ಗೆ ಸ್ವಾಧೀನಪಡಿಸಿಕೊಳ್ಳುವುದಾಗಿ ಘೋಷಿಸಿದೆ.
ಬಿಲಿಯನೇರ್ ಮುಖೇಶ್ ಅಂಬಾನಿ ಒಡೆತನದಲ್ಲಿ ಖIಐ ಇದೆ. ಈಗ ಈ ಸಂಸ್ಥೆ ಕೊಲಂಬಸ್ ಸೆಂಟರ್ ನ್ಯೂಯಾರ್ಕ್ ನಗರದ ಪ್ರೀಮಿಯಂ ಐಷಾರಾಮಿ ಹೋಟೆಲ್ಗಳಲ್ಲಿ ಒಂದಾದ ಮ್ಯಾಂಡರಿನ್ ಓರಿಯಂಟಲ್ ನ್ಯೂಯಾರ್ಕ್ನಲ್ಲಿ 73.37 ಶೇಕಡಾ ಪಾಲನ್ನು ಪರೋಕ್ಷವಾಗಿ ಹೊಂದಿದೆ.
ಮ್ಯಾಂಡರಿನ್ ಓರಿಯಂಟಲ್ನ ನ್ಯೂಯಾರ್ಕ್ ಆಸ್ತಿಯು ನ್ಯೂಯಾರ್ಕ್ ನಗರದ ಪ್ರಸಿದ್ಧ ಸ್ಥಳವಾದ ಸೆಂಟ್ರಲ್ ಪಾರ್ಕ್ ಬಳಿ ಇದೆ. ಈ ಐಕಾನಿಕ್ ಐಷಾರಾಮಿ ಹೋಟೆಲ್ನ್ನು 2003 ರಲ್ಲಿ ಸ್ಥಾಪಿಸಲಾಗಿತ್ತು.