Publish Date: Mon, 11 Oct 2021 (12:08 IST)
Updated Date: Mon, 11 Oct 2021 (00:10 IST)
ನವದೆಹಲಿ : ಸೋಲಾರ್ ಪ್ಯಾನೆಲ್ಗಳನ್ನು ನಿರ್ಮಿಸುವ, ನಾರ್ವೆ ಮೂಲದ ರೆಕ್ ಸೋಲಾರ್ ಹೋಲ್ಡಿಂಗ್ಸ್ (ರೆಕ್ ಗ್ರೂಪ್) ಕಂಪನಿಯನ್ನು ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್), ಸುಮಾರು 5,800 ಕೋಟಿ ರೂ.ಗಳ ಮೊತ್ತಕ್ಕೆ ಖರೀದಿಸಿದೆ.
ರಿಲಯನ್ಸ್ ನ್ಯೂ ಎನರ್ಜಿ ಸೋಲಾರ್ ಲಿಮಿಟೆಡ್ (ಆರ್ಎನ್ಇಎಸ್ಎಲ್) ಸಂಸ್ಥೆಯ ಹೆಸರಿನಲ್ಲಿ ರೆಕ್ ಕಂಪನಿಯನ್ನು ಖರೀದಿಸಲಾಗಿದೆ.
ರೆಕ್ ಕಂಪನಿಯ ಒಡೆತನವನ್ನು “ಚೀನಾ ನ್ಯಾಷನಲ್ ಬ್ಲೂಸ್ಟಾರ್ ಕಂಪನಿ (ಕೆಲವು ವರ್ಷಗಳ ಹಿಂದೆ ಖರೀದಿಸಿತ್ತು. ಆದರೂ, ಅದರ ಕೇಂದ್ರ ಕಚೇರಿ, ನಾರ್ವೆ ದೇಶದಲ್ಲೇ ಇತ್ತು. ಈಗ ಇದು ರಿಲಯನ್ಸ್ ಪಾಲಾಗಿದೆ ಎಂದು ಮೂಲಗಳು ತಿಳಿಸಿವೆ.