Select Your Language

Notifications

webdunia
webdunia
webdunia
webdunia

ಮಲಬಾರ್ ಗೋಲ್‌ನಿಂದ ಆಭರಣಗಳ ಮಾರಾಟ ಮೇಳ

ಮಲಬಾರ್ ಗೋಲ್‌ನಿಂದ ಆಭರಣಗಳ ಮಾರಾಟ ಮೇಳ
ಬೆಂಗಳೂರು , ಭಾನುವಾರ, 10 ಅಕ್ಟೋಬರ್ 2021 (12:50 IST)
ಬೆಂಗಳೂರುಗಳ ಮಾರಾಟ ಕ್ಷೇತ್ರದಲ್ಲಿ ಹೆಸರುವಾಸಿ ಆಗಿರುವ ಮಲಬಾರ್ ಗೋಲ್ಡ್ ಆಯಂಡ್ ಡೈಮಂಡ್ಸ್ನ ಕಲಾತ್ಮಕ ಬ್ರ್ಯಾಂಡೆಡ್ ಆಭರಣಗಳ ಮಾರಾಟ ಮತ್ತು ಪ್ರದರ್ಶನ ಮೇಳ ಶನಿವಾರದಿಂದ ಆರಂಭವಾಗಿದೆ. 

ಭಿನ್ನಶೈಲಿಯ ವಜ್ರಾಭರಣ
ಅಪರೂಪದ ಈ ಪ್ರದರ್ಶನ ಮತ್ತು ಮಾರಾಟ ಮೇಳ ಅ.17ರ ವರೆಗೂ ನಡೆಯಲಿದೆ. ಜಯನಗರ ಮತ್ತು ರಾಜಾಜಿನಗರದ ಶೋ ರೂಮ್ನಲ್ಲಿ ಮೇಳ ಆರಂಭವಾಗಿದ್ದು ಗ್ರಾಹಕರ ಮತ್ತು ಸಿಬ್ಬಂದಿಗಳ ಸಮ್ಮುಖದಲ್ಲಿ ಚಿತ್ರನಟಿ ಅದಿತಿ ಪ್ರಭುದೇವ ಅವರು ಶನಿವಾರ ಚಾಲನೆ ನೀಡಿದರು. ಇಲ್ಲಿ ದೊರೆಯುವ ಆಭರಣಗಳು ಕಲಾಕೌಶಲ್ಯಕ್ಕೆ ಮಾದರಿಯಾಗಿವೆ.
ಅಲ್ಲದೆ ಪ್ರತಿ ಆಭರಣವು ವಿಶೇಷ ಪರಿಣಿತರಿಂದ ವಿನ್ಯಾಸಗೊಲಿಸಲಾಗಿದೆ. ಮಾರಾಟ ಮತ್ತು ಪ್ರದರ್ಶನ ಮೇಳದಲ್ಲಿ ಮಲಬಾರ್ ಗೋಲ್ಡ್ ಆಯಂಡ್ ಡೈಮಂಡ್ಸ್ನ ಉಪ ಉತ್ಪನ್ನಗಳಾದ ಎಂಐಎನ್ಇ ಡೈಮಂಡ್ಸ್ ಜ್ಯೂವೆಲ್ಲರಿ, ಇಆರ್ಎ, ಡಿವೈನ್ ಇಂಡಿಯಾ ಹೆರಿಟೇಜ್ ಜ್ಯೂವೆಲ್ಲರಿ ಹಾಗೂ ಮಕ್ಕಳ ಆಭರಣಗಳು ಸೇರಿದಂತೆ ಮತ್ತಿತರ ಭಿನ್ನ ಶೈಲಿಯ ಆಭರಣಗಳು ಗ್ರಾಹಕರಿಗೆ ದೊರೆಯಲಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಲ್ಲಿ ಕೊರೋನಾ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆ