Publish Date: Mon, 27 Sep 2021 (10:38 IST)
Updated Date: Mon, 27 Sep 2021 (00:18 IST)
ನವದೆಹಲಿ : ಫ್ಲಿಪ್ಕಾರ್ಟ್ ಕಂಪನಿಯಂತೆಯೇ ಅಮೆಜಾನ್ ಸಹ ತನ್ನ ಹಬ್ಬದ ಮಾರಾಟ ಮೇಳದ ದಿನಾಂಕ ಬದಲಿಸಿದ್ದು, ಅಕ್ಟೋಬರ್ 3ರಿಂದಲೇ 'ಗ್ರೇಟ್ ಇಂಡಿಯನ್ ಫೆಸ್ಟಿವಲ್' ಆರಂಭಿಸುವುದಾಗಿ ಘೋಷಿಸಿದೆ.
ಎರಡೂ ಕಂಪನಿಗಳ ಮಾರಾಟ ಮೇಳವು ಒಂದೇ ದಿನ ಆರಂಭವಾಗಲಿದೆ. ಕಳೆದ ವರ್ಷದಂತೆಯೇ ಈ ಬಾರಿಯೂ ಸ್ಪರ್ಧೆಯು ತೀವ್ರವಾಗಿರುವ ನಿರೀಕ್ಷೆ ಇದೆ. ಫ್ಲಿಪ್ಕಾರ್ಟ್ನ 'ಬಿಗ್ ಬಿಲಿಯನ್ ಡೇಸ್' ಮಾರಾಟವು ಎಂಟು ದಿನಗಳದ್ದಾಗಿದ್ದರೆ, ಅಮೆಜಾನ್ನ 'ಗ್ರೇಟ್ ಇಂಡಿಯನ್ ಫೆಸ್ಟಿವಲ್' ಮಾರಾಟವು ಒಂದು ತಿಂಗಳವರೆಗೆ ನಡೆಯಲಿದೆ.