Select Your Language

Notifications

webdunia
webdunia
webdunia
webdunia

ಮಹಾಲಿಂಗೇಶ್ವರ ದೇವಸ್ಥಾನದಿಂದ ಶ್ರೀ ರಾಮಾಶ್ವಯಾತ್ರೆಗೆ ಚಾಲನೆ

Rama mandir

geetha

ಪುತ್ತೂರು , ಶನಿವಾರ, 20 ಜನವರಿ 2024 (20:20 IST)
Rama mandir
ಪುತ್ತೂರು: ಶ್ರೀ ರಾಮಾಶ್ವ ಯಾತ್ರೆ ಜ.20ರಂದು 8 ಗ್ರಾಮಗಳನ್ನು ಸಂಪರ್ಕ ಮಾಡಲಿದೆ. ಬೆಳಗ್ಗೆ ಗಂಟೆ 8ಕ್ಕೆ ಕೆಮ್ಮಿಂಜೆ ಶ್ರೀ ಮಹಾವಿಷ್ಣು ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ, 9.00 ಕ್ಕೆ ನರಿಮೊಗರು ಮುಕ್ವೆ ಶ್ರೀ ಉಮಾಮಹೇಶ್ವರಿ ದೇವಸ್ಥಾನ, ಬೆಳಗ್ಗೆ 10 ಗಂಟೆಗೆ ಶಾಂತಿಗೋಡು ಶ್ರೀ ಮಹಾವಿಷ್ಣು ದೇವಸ್ಥಾನ, 11 ಗಂಟೆಗೆ ಸರ್ವೆ ವೀರಮಂಗಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ, ಮಧ್ಯಾಹ್ನ 12 ಗಂಟೆಗೆ ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನ, ಮಧ್ಯಾಹ್ನ 1 ಗಂಟೆಗೆ ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನ, ಮಧ್ಯಾಹ್ನ 2 ಗಂಟೆಗೆ ಕೆದಂಬಾಡಿ ಸನ್ಯಾಸಿಗುಡ್ಡೆ ಭಜನಾ ಮಂದಿರ, ಮಧ್ಯಾಹ್ನ 3 ಗಂಟೆಗೆ ಒಳಮೊಗ್ರು ಕುಂಬ್ರ ಶ್ರೀ ರಾಮ ಭಜನಾ ಮಂದಿರಕ್ಕೆ ಅಶ್ವ ತೆರಳಲಿದೆ.

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಜ.22ರಂದು ನಡೆಯಲಿರುವ ಶ್ರೀ ರಾಮಲಲ್ಲಾನ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ಶ್ರೀ ರಾಮನ ದಿಗ್ವಿಜಯದ ಸಂಕೇತವಾಗಿ ಸೀಮೆಗೆ ಸಂಬಂಧಿಸಿ ಮೂರು ದಿವಸ ಪುತ್ತೂರು ತಾಲೂಕಿನ ದೇವಸ್ಥಾನಗಳಿಗೆ ಭೇಟಿ ನೀಡಲಿರುವ ‘ಶ್ರೀ ರಾಮಾಶ್ವ ಯಾತ್ರೆ’ಗೆ ಜ.19ರಂದು ದೇವಳದ ರಥ ಬೀದಿಯಲ್ಲಿ ಚಾಲನೆ ನೀಡಲಾಯಿತು. ಮೈಸೂರಿನಿಂದ ಬಂದಿರುವ ಶ್ವೇತ ವರ್ಣದ ಅಶ್ವಕ್ಕೆ ಬೆಳಿಗ್ಗೆ ದೇವಳದ ವಠಾರದಲ್ಲಿ ಹೂವಿನ ಹಾರ ಹಾಕಿ ಗಂಧ ಪ್ರಸಾದ ಹಚ್ಚಿ ತೀರ್ಥ ಸಿಂಪಡಿಸಲಾಯಿತು.

ಜ.೨೨ಕ್ಕೆ ಶ್ರೀ ರಾಮ ತಾರಕ ಹವನ ನಡೆಯಲಿದ್ದು, ಅಂದು ನಡೆಯುವ ಶ್ರೀರಾಮ ತಾರಕ ಯಜ್ಞಕ್ಕೆ ಬೇಕಾದ ತುಪ್ಪ, ಬೆಲ್ಲ ಸಹಿತ ಸಮಿತ್ತುಗಳನ್ನು ಅರ್ಘ್ಯಗಳನ್ನು ನೀಡಿ ಬೀಳ್ಕೊಡುವ ಕಾರ್ಯಕ್ರಮ ನಡೆಯಲಿದೆ.ಅದೇ ರೀತಿ ಶ್ರೀರಾಮ ತಾರಕ ಯಜ್ಞದಲ್ಲಿ ಹತ್ತು ಸಾವಿರ ಆಹುತಿಯೊಂದಿಗೆ ಸುಮಾರು 1 ಲಕ್ಷ ‘ಶ್ರೀ ರಾಮ ಜಯ ರಾಮ ಜಯ ಜಯ ರಾಮ’ ಸಂಕಲ್ಪವನ್ನು ಎಲ್ಲರೂ ಮಾಡುವ ಮೂಲಕ ಶ್ರೀ ರಾಮ ತಾರಕ ಹವನ ಸಂಪನ್ನಗೊಳ್ಳಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಣತೆಗಳ ಸಾಲಿನ ಬೆಳಕಿನಲ್ಲಿ ಮೂಡಿಬಂದ ರಾಮ