Select Your Language

Notifications

webdunia
webdunia
webdunia
webdunia

ಆಡಿಷನ್ ನೆಪ ಹೇಳಿ ಈತ ಕೇಳುತ್ತಿದ್ದ ಫೋಟೊ ಯಾವುದು ಗೊತ್ತಾ?

ಆಡಿಷನ್ ನೆಪ ಹೇಳಿ ಈತ ಕೇಳುತ್ತಿದ್ದ ಫೋಟೊ ಯಾವುದು ಗೊತ್ತಾ?
ನವದೆಹಲಿ , ಮಂಗಳವಾರ, 22 ಸೆಪ್ಟಂಬರ್ 2020 (10:10 IST)
ನವದೆಹಲಿ : ಸೋಶಿಯಲ್ ವೆಬ್ ಸರಣಿಯಲ್ಲಿ ಆಡಿಷನ್ ಮಾಡಲು ಅವಕಾಶ ನೀಡುವುದಾಗಿ ನಂಬಿಸಿ ನಕಲಿ ಖಾತೆಗಳನ್ನು ಸೃಷ್ಟಿಸಿ ಯುವತಿಯರ ನಗ್ನ ಫೋಟೋಗಳನ್ನು ಸಂಗ್ರಹಿಸಿದ್ದಕ್ಕಾಗಿ 37 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.

ಈತನ ಬಳಿ ಅವಕಾಶಕ್ಕಾಗಿ ಮಹಿಳೆಯೊಬ್ಬಳು ಸಂಪರ್ಕಿಸಿದಾಗ ಆಕೆಗೆ ಆಡಿಷನ್ ಗಾಗಿ ತನ್ನ ಸಾಮಾನ್ಯ ಹಾಗೂ ನಗ್ನ ಚಿತ್ರಗಳನ್ನು ಹಂಚಿಕೊಳ್ಳಲು ಹೇಳಿದ್ದಾನೆ. ಅದರಂತೆ ಆಕೆ ತನ್ನ ನಗ್ನ ಚಿತ್ರಗಳನ್ನು ಕಳುಹಿಸಿದ್ದಾಳೆ. ಆದರೆ ಇನ್ನಷ್ಟು ನಗ್ನ ಫೋಟೊಗಳನ್ನು ಕಳುಹಿಸಲು ಒತ್ತಾಯಿಸಿದ್ದಾನೆ. ಇದನ್ನು ಮಹಿಳೆ ನಿರಾಕರಿಸಿದಾಗ ಆಕೆಗೆ ಕಿರುಕುಳ ನೀಡಲು ಪ್ರಯತ್ನಿಸಿ  ಅವಳ ನಗ್ನ ಚಿತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಈ ಬಗ್ಗೆ ಮಹಿಳೆ  ಆತನ  ವಿರುದ್ಧ ಪೊಲೀಸರು ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು  ಆರೋಪಿಯನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೀನೂಟಕ್ಕೆ ಕರೆಯಲಿಲ್ಲವೆಂದು ಚಿಕ್ಕಪ್ಪನಿಗೆ ಮಕ್ಕಳು ಮಾಡಿದ್ದೇನು ಗೊತ್ತಾ?