Select Your Language

Notifications

webdunia
webdunia
webdunia
webdunia

ಮೀನೂಟಕ್ಕೆ ಕರೆಯಲಿಲ್ಲವೆಂದು ಚಿಕ್ಕಪ್ಪನಿಗೆ ಮಕ್ಕಳು ಮಾಡಿದ್ದೇನು ಗೊತ್ತಾ?

webdunia
ಮಂಗಳವಾರ, 22 ಸೆಪ್ಟಂಬರ್ 2020 (10:02 IST)
ಲಕ್ನೋ : ಮೀನೂಟಕ್ಕೆ ತನ್ನ ಮನೆಗೆ ಕರೆಯಲಿಲ್ಲವೆಂದು ವ್ಯಕ್ತಿಯೊಬ್ಬನನ್ನು ಆತನ ಸಹೋದರನ ಮಕ್ಕಳು ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ವಾರಾಣಸಿಯ ಸಿಕರೌಲಿ ಗ್ರಾಮದಲ್ಲಿ ನಡೆದಿದೆ.

ತುಷಾರ್ ಕಾಂತ್ ಉರ್ಫ್ ಸೋನು(30) ಮೃತಪಟ್ಟ ವ್ಯಕ್ತಿ. ನಾಲ್ವರು ಸಹೋದರರಲ್ಲಿ ಈತ ನಾಲ್ಕನೆಯವನು. ಈತ ತನ್ನ ಮನೆಯಲ್ಲಿ ಮೀನೂಟಕ್ಕೆ ತನ್ನ ಹಿರಿಯ ಸಹೋದರನನ್ನು ಮಾತ್ರ ಕರೆದಿದ್ದ. ಇದರಿಂದ ಕೋಪಗೊಂಡ ಉಳಿದ ಸಹೋದರನ ಮಕ್ಕಳು ಬ್ಯಾಟ್ ಗಳನ್ನು ಹಿಡಿದು ಚಿಕ್ಕಪ್ಪನ ಮನೆಗೆ ಬಂದು ಆತನ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

ತೀವ್ರವಾಗಿ ಗಾಯಗೊಂಡ ಆತನನ್ನು ಸಹೋದರ ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ದೂರು ನೀಡಿದ್ದಾನೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಸಾವನಪ್ಪಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪರಾರಿಯಾದ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia Hindi

ಮುಂದಿನ ಸುದ್ದಿ

ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ನಲ್ಲಿ ಪರಿಚಯನಾದವ ಎಸಗಿದ ಇಂತಹ ನೀಚ ಕೃತ್ಯ