ತಂದೆ ತಾಯಿಯ ಜೊತೆ ಇರಲು ಒಪ್ಪದ ಹೆಂಡತಿಗೆ ಪತಿ ಮಾಡಿದ್ದೇನು ಗೊತ್ತಾ?

ಭಾನುವಾರ, 23 ಫೆಬ್ರವರಿ 2020 (08:57 IST)
ಲಕ್ನೋ : ತಂದೆ ತಾಯಿಯ ಜೊತೆ ಇರಲು ಒಪ್ಪದ ಹೆಂಡತಿಯನ್ನು ಪತಿಯೊಬ್ಬ ಶೂಟ್ ಮಾಡಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.


ಪಿಂಕಿಠಾಕುರ್ ಹಾಗೂ ಶಿವಾನಿ ಸಿಂಗ್  5 ವರ್ಷಗಳ ಹಿಂದೆ ಮದುವೆಯಾಗಿದ್ದರು. ಮದುವೆಯ ಬಳಿಕ ಇಬ್ಬರು ಜೈಪುರದಲ್ಲಿ ವಾಸಿಸುತ್ತಿದ್ದರು. ಆದರೆ ಮದುವೆಗೆಂದು ಶಿಕೋಹಬಾದ್ ಗೆ ಬಂದಿದ್ದರು. ಆದರೆ ಆಗ ಪತಿ ಜೈಪುರಕ್ಕೆ ಹೋಗುವುದು ಬೇಡ ಇಲ್ಲೆ ತನ್ನ ಅಪ್ಪ ಅಮ್ಮನ ಜೊತೆ ಇರೋಣ ಎಂದು ಹೇಳಿದ್ದಾನೆ. ಇದಕ್ಕೆ ಪತ್ನಿ ಒಪ್ಪದಿದ್ದಾಗ ಮಾತಿಗೆ ಮಾತು ಬೆಳೆದು ಕೋಪಗೊಂಡ ಆತ ತನ್ನ ಬಳಿಯಿದ್ದ ಗನ್ ನಿಂದ ಪತ್ನಿಯ ಕತ್ತಿನ ಭಾಗಕ್ಕೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ.


ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಶಿವಾನಿಯನ್ನು ಸ್ಥಳಿಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯ ಹುಡುಕಾಟ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪಾಕ್ ಗೆ ಜೈ ಎಂದೋರು ಹುಟ್ಟಿದ್ದು ಯಾರಿಗೆ?