ಚೆನ್ನೈ : ಮೇಲ್ಜಾತಿಯವರ ಜಮೀನಿನಲ್ಲಿ ಮಲವಿಸರ್ಜನೆ ಮಾಡಿದ್ದ ದಲಿತ ಯುವಕನೊಬ್ಬನ್ನು ಅಲ್ಲಿನ ಸ್ಥಳೀಯರು ಕೈಕಾಲು ಕಟ್ಟಿ ಹೊಡೆದು ಸಾಯಿಸಿದ ಘಟನೆ ತಮಿಳುನಾಡಿನ ವಿಲ್ಲಪುರಂ ಜಿಲ್ಲೆಯಲ್ಲಿ ನಡೆದಿದೆ.
									
										
								
																	
ಶಕ್ತಿವೆಲ್  ಮೃತಪಟ್ಟ ಯುವಕ. ಈ ಘಟನೆ ಫೆ.12ರಂದು ನಡೆದಿದ್ದು, ಜನರು ಆತನನ್ನು ಥಳಿಸಿರುವ ವಿಡಿಯೋ ವೈರಲ್ ಆದ ಹಿನ್ನಲೆಯಲ್ಲಿಇದೀಗ ಬೆಳಕಿಗೆ ಬಂದಿದೆ.
									
			
			 
 			
 
 			
			                     
							
							
			        							
								
																	
ಈ ಘಟನೆಗೆ ಸಂಬಂಧಿಸಿದಂತೆ ಆತನ ಸಹೋದರಿ ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಪೊಲೀಸರು ಎಸ್.ಸಿ/ಎಸ್.ಟಿ. ದೌರ್ಜನ್ಯ ತಡೆ  ಮತ್ತು ಕೊಲೆ ಅಪರಾಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.