Publish Date: Sun, 16 Feb 2020 (14:40 IST)
Updated Date: Sun, 16 Feb 2020 (14:42 IST)
ರಾಜ್ಯ ಸರಕಾರದ ಬಜೆಟ್ ಮಂಡನೆಗೆ ಫೆ. 17 ರಿಂದ ಅಧಿವೇಶನ ಆರಂಭಗೊಳ್ಳಲಿದ್ದು, ಕ್ಷಣಗಣನೆ ಶುರುವಾಗಿದೆ.
ಅಧಿವೇಶನ ಹಾಗೂ ಬಜೆಟ್ ಮೇಲಿನ ಚರ್ಚೆಯಲ್ಲಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸೋಕೆ ಅಂತ ಕಾಂಗ್ರೆಸ್ ಸಜ್ಜಾಗಿದೆ.
ಇನ್ನು, ಮೈತ್ರಿ ಸರಕಾರ ಕೆಡವಿ ಅಧಿಕಾರಕ್ಕೆ ಬಂದಿರೋ ಬಿಜೆಪಿ ನಾಯಕರ ವಿರುದ್ಧ ಸೇಡು ತೀರಿಸಿಕೊಳ್ಳಲು ಜೆಡಿಎಸ್ ಕೂಡ ತನ್ನದೇ ಕಾರ್ಯತಂತ್ರಕ್ಕೆ ಮೊರೆ ಹೋಗಿದೆ.
ರಾಜ್ಯ ಬಜೆಟ್ ಹಾಗೂ ಅಧಿವೇಶನ ಕುತೂಹಲ ಕೆರಳಿಸಿದ್ದು, ರಾಜಕೀಯ ಬೆಳವಣಿಗೆ ಇನ್ಯಾವ ದಿಕ್ಕಿನತ್ತ ಹೊರಳುತ್ತದೆ ಅನ್ನೋದು ಕುತೂಹಲ ಮೂಡಿಸಿದೆ.