ವೈದ್ಯಕೀಯ ಸೇವಾಕೇಂದ್ರ ಬೇಕೆ ಬೇಕೆಂದ ಬಿಜೆಪಿ ಸಂಸದ

ಶನಿವಾರ, 15 ಫೆಬ್ರವರಿ 2020 (18:18 IST)
ಗುಣಮಟ್ಟದ ವೈದ್ಯಕೀಯ ಸೇವಾ ಕೇಂದ್ರ ತೀರಾ ಅತ್ಯಗತ್ಯವಾಗಿದೆ ಅಂತ ಬಿಜೆಪಿ ಸಂಸದ ಹೇಳಿದ್ದಾರೆ.

ಹಾವೇರಿ ಜಿಲ್ಲೆಗೆ ಉತ್ತಮ ಗುಣಮಟ್ಟದ ವೈದ್ಯಕೀಯ ಸೇವಾಕೇಂದ್ರ ಅತ್ಯವಶ್ಯವಾಗಿದೆ. ಮುಂಬರುವ ದಿನಗಳಲ್ಲಿ ಕೆಎಲ್‍ಇ ಸಂಸ್ಥೆ ಪೂರ್ಣ ಪ್ರಮಾಣದ ಸುಸಜ್ಜಿತವಾದ ಆಸ್ಪತ್ರೆಯನ್ನು ಪ್ರಾರಂಭಗೊಳಿಸಿ ಈ ಭಾಗದ ಜನರಿಗೆ ಅನುಕೂಲ ಕಲ್ಪಿಸಿಕೊಡಬೇಕು. ಆಸ್ಪತ್ರೆ ನಿರ್ಮಾಣಕ್ಕೆ ಅವಶ್ಯವಿರುವ ಸಕಲ ಸೌಲಭ್ಯಗಳನ್ನು ಕಲ್ಪಿಸಿಕೊಡುವುದರೊಂದಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಸಂಸದ  ಶಿವಕುಮಾರ ಉದಾಸಿ ಹೇಳಿದ್ರು.

ಹಾವೇರಿಯಲ್ಲಿ ಕೆಎಲ್‍ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಸಂಪರ್ಕ ಮತ್ತು ಮಾಹಿತಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ಕೆಎಲ್‍ಇ ಸಂಸ್ಥೆಯು ಈಗಾಗಲೇ ಬೆಳಗಾವಿ ಆಸ್ಪತ್ರೆಯಲ್ಲಿ 2400 ಬೆಡ್ ಸೌಲಭ್ಯವುಳ್ಳ ಆಸ್ಪತ್ರೆ ನಿರ್ಮಿಸಿದೆ. ಹುಬ್ಬಳ್ಳಿಯಲ್ಲಿ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರವು ನಿರ್ಮಾಣಗೊಳ್ಳುತ್ತಿದೆ ಎಂದ್ರು.ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ದಾಖಲೆ ಪ್ರಮಾಣದಲ್ಲಿ ಕಬ್ಬು ಅರೆಯುತ್ತಿರೋ ಸಕ್ಕರೆ ಕಾರ್ಖಾನೆ