ಗೂಬೆಯೊಂದಿಗೆ ಟಿಕ್ ಟಾಕ್ ಮಾಡಿ ದಂಡ ಕಟ್ಟಿದ ಯುವತಿ

ಭಾನುವಾರ, 16 ಫೆಬ್ರವರಿ 2020 (07:39 IST)
ಗುಜರಾತ್ : ಗೂಬೆಯೊಂದಿಗೆ ಟಿಕ್ ಟಾಕ್ ಮಾಡಿದ ಕಾರಣ ಯುವತಿಯೊಬ್ಬಳಿಗೆ 25 ಸಾವಿರ ದಂಡ ವಿಧಿಸಿದ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದೆ.    


ಕೀರ್ತಿ ಪಟೇಲ್ ಎಂಬ ಯುವತಿ ಇತ್ತೀಚೆಗೆ ಅಳಿವಿನಂಚಿನಲ್ಲಿರುವ ಗೂಬೆಯೊಂದನ್ನು ಹಿಡಿದು ಟಿಕ್ ಟಾಕ್ ಮಾಡಿ ವಿಡಿಯೋ ಹಂಚಿಕೊಂಡಿದ್ದಾಳೆ. ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಈ ಬಗ್ಗೆ ಪ್ರಾಣಿ ಪ್ರಿಯರು ವನ್ಯ ಜೀವಿ ಹಾಗೂ ಪ್ರಕೃತಿ ಕಲ್ಯಾಣ ಟ್ರಸ್ಟ್ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.


ವನ್ಯ ಜೀವಿ ಸಂರಕ್ಷಣಾ ಕಾಯ್ದೆಯಡಿ ಕೀರ್ತಿಯನ್ನು ವಶಕ್ಕೆ ಪಡೆದ ಅಧಿಕಾರಿಗಳು ಆಕೆಗೆ 25 ಸಾವಿರ ದಂಡ ವಿಧಿಸಿದ್ದಾರೆ. ಮತ್ತು ಗೂಬೆ ಹಿಡಿದುಕೊಟ್ಟವರಿಗೆ 10 ಸಾವಿರ ದಂಡ ವಿಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕಾಲೇಜಿನ ಆವರಣದಲ್ಲಿ ಸ್ಯಾನಿಟರಿ ಪ್ಯಾಡ್ ಸಿಕ್ಕಿದ್ದಕ್ಕೆ ಶಿಕ್ಷಕಿಯರು ವಿದ್ಯಾರ್ಥಿನಿಯರಿಗೆ ಮಾಡಿದ್ದೇನು ಗೊತ್ತಾ?