50ಲಕ್ಷ ಮುಸ್ಲಿಂ ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕಲಾಗುವುದು- ದಿಲೀಪ್ ಘೋಷ್

ಸೋಮವಾರ, 20 ಜನವರಿ 2020 (11:33 IST)
ಕೊಲ್ಕತ್ತಾ: 50ಲಕ್ಷ ಮುಸ್ಲಿಂ ಅಕ್ರಮ ವಲಸಿಗರನ್ನು ಗುರುತಿಸಿ ದೇಶದಿಂದ ಹೊರಹಾಕಲಾಗುವುದು ಎಂದು ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.50 ಲಕ್ಷ ಮುಸ್ಲಿಂ ನುಸುಳುಕೋರರನ್ನು ಗುರುತಿಸಲಾಗಿದೆ. ಒಂದು ವೇಳೆ ಅಗತ್ಯಬಿದ್ದರೆ ಅವರನ್ನು ದೇಶದಿಂದ ಹೊರಗಟ್ಟಲಾಗುವುದು. ಅದಕ್ಕೂ ಮೊದಲು ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗುವುದು. ಆಗ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಉಳಿಸಿಕೊಳ್ಳಲು ಯಾವ ಕಾರಣವೂ ಇರುವುದಿಲ್ಲ ಎಂದು  ದಿಲೀಪ್ ಘೋಷ್ ಹೇಳಿದ್ದಾರೆ.


ಈ ಹೇಳಿಕೆ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದು, ಆ ಮೂಲಕ ದಿಲೀಪ್ ಘೋಷ್ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕುಡಿದ ಮತ್ತಿನಲ್ಲಿ ಮಲಗಿದ್ದ ಗೆಳತಿಯ ಮೇಲೆರಗಿದ ಗೆಳೆಯರು