ಕುಡಿದ ಮತ್ತಿನಲ್ಲಿ ಮಲಗಿದ್ದ ಗೆಳತಿಯ ಮೇಲೆರಗಿದ ಗೆಳೆಯರು

ಸೋಮವಾರ, 20 ಜನವರಿ 2020 (11:26 IST)
ಬೆಂಗಳೂರು : ಕುಡಿದ ಮತ್ತಿನಲ್ಲಿ ಮಲಗಿದ್ದ ಗೆಳತಿಯ ಮೇಲೆ ಗೆಳೆಯರಿಬ್ಬರು ಸರದಿ ಪ್ರಕಾರ  ಅತ್ಯಾಚಾರ ಎಸಗಿದ ಘಟನೆ ಲೋಟ್ಟೆಗೊಲ್ಲಹಳ್ಳಿಯಲ್ಲಿ ನಡೆದಿದೆ.ನಿಖಿಲ್, ಅಭಿನವ್ ಇಂತಹ ನೀಚ ಕೃತ್ಯ ಎಸಗಿದ ಗೆಳೆಯರು. ಪಬ್ ನಲ್ಲಿ ಪಾರ್ಟಿ ಮಾಡಿ ಕಂಠಪೂರ್ತಿ ಕುಡಿದ ಗೆಳತಿ ಪಿಜಿಗೆ ಹೋಗಲು ಸಾಧ್ಯವಾಗದ ಕಾರಣ ಆಕೆಯನ್ನು ಮನೆಗೆ ಕರೆದುಕೊಂಡು ಬಂದು ಬೆಡ್ ರೂಂನಲ್ಲಿ ಮಲಗಿಸಿ ಒಬ್ಬರಾದ ಮೇಲೆ ಇನ್ನೊಬ್ಬರು ಅತ್ಯಾಚಾರ ಎಸಗಿದ್ದಾರೆ.


ಬೆಳಿಗ್ಗೆ ಎಚ್ಚರಗೊಂಡ ಯುವತಿಗೆ ಈ ವಿಚಾರ ತಿಳಿದು ಇಬ್ಬರು ಗೆಳೆಯರ ಮೇಲೆ ಕೋಡಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಗೆಳೆಯರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕೊಟ್ಟ ಹಣ ವಾಪಾಸು ಕೇಳಿದ ಮಹಿಳೆಗೆ ಆತ ಮಾಡಿದ್ದೇನು ಗೊತ್ತಾ?