Select Your Language

Notifications

webdunia
webdunia
webdunia
webdunia

ಸಿಎಂ ಮಮತಾ ಬ್ಯಾನರ್ಜಿ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದು ಯಾರಿಗೆ ಗೊತ್ತೇ?

ಸಿಎಂ ಮಮತಾ ಬ್ಯಾನರ್ಜಿ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದು ಯಾರಿಗೆ ಗೊತ್ತೇ?
ಕೋಲ್ಕತ್ತಾ , ಶುಕ್ರವಾರ, 27 ಡಿಸೆಂಬರ್ 2019 (06:16 IST)
ಕೋಲ್ಕತ್ತಾ: ಮಂಗಳೂರಿನಲ್ಲಿ  ನಡೆದ ಪೊಲೀಸ್ ಪೈರಿಂಗ್ ನಲ್ಲಿ ಮೃತಪಟ್ಟವರಿಗೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.



ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯ ವೇಳೆ ಪೊಲೀಸ್ ಪೈರಿಂಗ್ ಗೆ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಆದರೆ ರಾಜ್ಯ ಬಿಜೆಪಿ ಸರ್ಕಾರ ಮೃತಪಟ್ಟವರು ಅಪರಾಧಿಗಳೆಂದು ಸಾಬೀತಾದರೆ ಅವರಿಗೆ ನೀಡಿದ ಪರಿಹಾರವನ್ನು ವಾಪಾಸ್ ಪಡೆಯುವುದಾಗಿ ಹೇಳಿದೆ.


ಈ ಬಗ್ಗೆ ಕಿಡಿಕಾರಿದ ಸಿಎಂ ಮಮತಾ ಬ್ಯಾನರ್ಜಿ, ಕರ್ನಾಟಕ ಸರ್ಕಾರ ಸಿಎಎ ಪ್ರತಿಭಟನೆ ವೇಳೆ ಪೊಲೀಸರ ಗುಂಡಿಗೆ ಬಲಿಯಾದವರಿಗೆ ನೀಡುತ್ತೇವೆ ಎಂದಿದ್ದ ಪರಿಹಾರ ಹಣವನ್ನು ವಾಪಾಸ್ ಪಡೆದಿದೆ. ಬಿಜೆಪಿ ಸರ್ಕಾರ ಮೊದಲು ಕೊಟ್ಟ ಭರವಸೆಯನ್ನು ಈಡೇರಿಸಿಲ್ಲ. ಕರ್ನಾಟಕ ಸಿಎಂ ಅವರು ಕೊಟ್ಟ ಪರಿಹಾರವನ್ನು ವಾಪಾಸ್ ಪಡೆದಿರುವ ಹಲವು ಉದಾಹರಣೆಗಳಿದ್ದು, ಆದರೆ ನಾವು ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ.ನೆರವು ನೀಡುವುದಾಗಿ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಗಿಬಿದ್ದು ನೋಡಿದ್ರು ಕಂಕಣ ಸೂರ್ಯಗ್ರಹಣ