Select Your Language

Notifications

webdunia
webdunia
webdunia
webdunia

ನಂಬಿ ಬಂದ ಮಹಿಳೆಯರಿಗೆ ಢೋಂಗಿ ಬಾಬಾ ಹೀಗೆ ಮಾಡೋದಾ?

Dhongi Baba
delhi , ಗುರುವಾರ, 7 ಡಿಸೆಂಬರ್ 2023 (10:59 IST)
ಕಿಸ್ಸಿಂಗ್ ಬಾಬಾ ಎಂದೇ ಜನಪ್ರಿಯಗೊಂಡಿರುವ ಈ ನಕಲಿ ಬಾಬಾನ ಬಳಿ ಆನಾರೋಗ್ಯ ಪೀಡಿತ, ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಜನರು ಬರುತ್ತಿದ್ದರು. ಆಗ ಈ ಬಾಬಾ ಅವರನ್ನು ಆಲಂಗಿಸಿ, ಚುಂಬಿಸುತ್ತಿದ್ದ. ಈ ರೀತಿ ಮಾಡುವುದರಿಂದ ನಿಮ್ಮ ಕಷ್ಟಗಳನ್ನೆಲ್ಲಾ ನಾನು ಪರಿಹರಿಸುತ್ತೇನೆ ಎಂದು ನಂಬಿಸುತ್ತಿದ್ದ.
 
ನಿಮ್ಮ ಸಮಸ್ಯೆ, ಆರ್ಥಿಕ ಸಂಕಷ್ಟಗಳನ್ನೆಲ್ಲಾ ಪರಿಹರಿಸುತ್ತೇನೆ' ಎಂದು ತನ್ನ ಬಳಿ ಬರುವ ಭಕ್ತರನ್ನು ಆಲಂಗಿಸಿ, ಚುಂಬಿಸುತ್ತಿದ್ದ ನಕಲಿ ಬಾಬಾನೊಬ್ಬ ಪೊಲೀಸರ ಅತಿಥಿಯಾಗಿರುವ ಘಟನೆ  ನಡೆದಿದೆ.

ಕಿಸ್ಸಿಂಗ್ ಬಾಬಾ ಇಲ್ಲಿನ ಅಯ್ಯಪ್ಪ ದೇವಸ್ಥಾನದ ಹಿಂಭಾಗದಲ್ಲಿನ ಒಂದು ಕೋಣೆಯಲ್ಲಿ ಕಳೆದ 2 ತಿಂಗಳಿನಿಂದ ಈ ಕೆಲಸ ಮಾಡುತ್ತಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇವನ ರಾಸಲೀಲೆ ಬಗ್ಗೆ ದೂರು ಬಂದ ನಂತರ ಪೊಲೀಸರು ದಾಳಿ ನಡೆಸಿ ಗುರುವಾರ ಬಂಧಿಸಿದ್ದರು.
 
ನಕಲಿ ಬಾಬಾನನ್ನು ಪೊಲೀಸರು  ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಕೋರ್ಟ್ ನಕಲಿ ಬಾಬಾನಿಗೆ ಜನವರಿ 7ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಅಲ್ಲದೇ ಬಾಬಾನನ್ನು  ನಗರದ ಮಾನಸಿಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡುವಂತೆ ನಿರ್ದೇಶನ ನೀಡಿದೆ.
 
ಅಷ್ಟೇ ಅಲ್ಲ ನಕಲಿ ಬಾಬಾನ ಪವಾಡಗಳ ಬಗ್ಗೆ ಪ್ರಚಾರ ಮಾಡುತ್ತಿದ್ದ ಬೆಂಬಲಿಗ ಸುಬ್ಬಾ ರೆಡ್ಡಿಯನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸ್ಥಾನಕ್ಕೆ ಲಾಬಿ ಮಾಡಲು ಸೊಸೆಯ ನೆಪ ಹೇಳಿದ ವಸುಂಧರಾ ರಾಜೆ