Select Your Language

Notifications

webdunia
webdunia
webdunia
webdunia

ಸಿಎಂ ಸ್ಥಾನಕ್ಕೆ ಲಾಬಿ ಮಾಡಲು ಸೊಸೆಯ ನೆಪ ಹೇಳಿದ ವಸುಂಧರಾ ರಾಜೆ

Vashudhara
ನವದೆಹಲಿ , ಗುರುವಾರ, 7 ಡಿಸೆಂಬರ್ 2023 (10:54 IST)
ನವದೆಹಲಿ: ಇತ್ತೀಚೆಷ್ಟೇ ನಡೆದ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಬಹುತಮದೊಂದಿಗೆ ಅಧಿಕಾರ ಪಡೆದುಕೊಂಡಿದೆ.

ಆದರೆ ಇದೀಗ ಬಿಜೆಪಿಯಲ್ಲಿ ರಾಜಸ್ಥಾನ ಸಿಎಂ ಆಯ್ಕೆ ಗೊಂದಲ ಕಾಡಿದೆ. ಸಿಎಂ ಸ್ಥಾನಕ್ಕಾಗಿ ಬಾಲಕ್ ನಾಥ್, ವಸುಂಧರಾ ರಾಜೆ, ದಿಯಾ ಕುಮಾರಿ ನಡುವೆ ತೀವ್ರ ಪೈಪೋಟಿಯಿದೆ.

ಈ ಪೈಕಿ ವಸುಂಧರಾ ರಾಜೆಗೆ ಮತ್ತೆ ಸಿಎಂ ಸ್ಥಾನ ಕಟ್ಟಲು ಹೈಕಮಾಂಡ್ ಗೆ ಅಷ್ಟೊಂದು ಮನಸ್ಸಿಲ್ಲ. ಆದರೆ ವಸುಂಧರಾ ರಾಜೆ ಸಿಎಂ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಈ ರಾಜ್ಯದ ಸಿಎಂ ಸ್ಥಾನದ ನಿರ್ಣಯ ಹೈಕಮಾಂಡ್ ಕಗ್ಗಂಟಾಗಿದೆ.

ಈ ನಡುವೆ ವಸುಂಧರಾ ರಾಜೆ ದೆಹಲಿಗೆ ಬಂದಿದ್ದು, ಹೈಕಮಾಂಡ್ ಮುಂದೆ ಲಾಬಿ ನಡೆಸಲೇ ಬಂದಿದ್ದರು ಎನ್ನಲಾಗಿತ್ತು. ಆದರೆ ಮಾಧ‍್ಯಮಗಳು ಪ್ರಶ್ನಿಸಿದಾಗ ಸೊಸೆ ಕಾಣಲು ಬಂದಿದ್ದೆ ಎಂದು ನೆಪ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರೇವಂತ್ ರೆಡ್ಡಿಗೆ ಪಟ್ಟ ಕಟ್ಟಲು ತೆಲಂಗಾಣಕ್ಕೆ ಬರಲಿದ್ದಾರೆ ಸೋನಿಯಾ, ರಾಹುಲ್, ಖರ್ಗೆ