Select Your Language

Notifications

webdunia
webdunia
webdunia
webdunia

ರೇಪ್ ಮತ್ತು ಸಮ್ಮತಿ ಲೈಂಗಿಕ ಕ್ರಿಯೆಯಲ್ಲಿ ಭಿನ್ನತೆಯಿದೆ ಎಂದ ಮಹಿಳಾ ಮಣಿ

consensual intimate
delhi , ಬುಧವಾರ, 6 ಡಿಸೆಂಬರ್ 2023 (08:05 IST)
ರೇಪ್ ಮತ್ತು  ಸಮ್ಮತಿ ಲೈಂಗಿಕ ಕ್ರಿಯೆಯಲ್ಲಿ ಭಿನ್ನತೆಯಿದೆ. ರೇಪ್ ಮತ್ತು ಸಮ್ಮತಿ ಲೈಂಗಿಕ ಕ್ರಿಯೆ ಬಗ್ಗೆ ವ್ಯತ್ಯಾಸ ಅರಿಯದಿರುವುದು ದುರದೃಷ್ಠಕರ ಸಂಗತಿಯಾಗಿದೆ ಎಂದು ಹಿರಿಯ ಮಹಿಳಾ ರಾಜಕಾರಣಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
 
18 ವರ್ಷ ವಯಸ್ಸಿನ ಯುವತಿಯರು ಸೆಕ್ಸ್‌ನಲ್ಲಿ ಪಾಲ್ಗೊಳ್ಳಲು ನ್ಯಾಯಾಲಯದ ಅನುಮತಿ ಬೇಕಾಗಿಲ್ಲ ಎಂದು ಹಿರಿಯ  ನಾಯಕಿ ರೇಣುಕಾ ಚೌಧರಿ ಹೇಳಿದ್ದಾರೆ.
 
ಯುವತಿಯರಿಗೆ ಸಾಮಾಜಿಕ ಮತ್ತು ನೈತಿಕತೆ ಅಗತ್ಯವಿರುವುದರಿಂದ ಮದುವೆಗಿಂತ ಮುಂಚೆ ಸೆಕ್ಸ್‌ನಲ್ಲಿ ಪಾಲ್ಗೊಳ್ಳುವುದು ಸರಿಯಲ್ಲ ಎಂದು ದೆಹಲಿ ಮೂಲದ ನ್ಯಾಯಮೂರ್ತಿಯೊಬ್ಬರ ಹೇಳಿಕೆಗೆ ಚೌಧರಿ ಪ್ರತಿಕ್ರಿಯೆ ನೀಡಿದ್ದಾರೆ.
 
ಯುವತಿಯರು ಯುವಕರೊಂದಿಗೆ ಸಮ್ಮತಿ ಸೆಕ್ಸ್‌ನಲ್ಲಿ ಭಾಗಿಯಾಗಿ ಉಭಯರ ನಡುವೆ ಭಿನ್ನಾಭಿಪ್ರಾಯ ಬಂದ ನಂತರ ನನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಆರೋಪಿಸುವುದು ಸರಿಯಲ್ಲ ಎಂದು ಹೆಚ್ಚುವರಿ ನ್ಯಾಯಾಧೀಶ ವಿರೇಂದ್ರ ಭಟ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.
 
19 ವರ್ಷ ವಯಸ್ಸಿನ ಯುವತಿಯರು ಪ್ರೌಢರಾಗಿದ್ದು, ತಿಳುವಳಿಕೆ ಹೊಂದಿರುತ್ತಾರೆ. ಇತರರೊಂದಿಗೆ ಸೆಕ್ಸ್‌ನಲ್ಲಿ ಭಾಗಿಯಾಗುವಾಗ ಮುಂದಾಗುವ ಅನಾಹುತಗಳ ಬಗ್ಗೆ ಎಚ್ಚರಿಕೆ ಇರುವುದು ಅಗತ್ಯವಾಗಿದೆ ಎಂದು ನ್ಯಾಯಾಧೀಶರು ನೀಡಿದ ಹೇಳಿಕೆಗೆ ರಾಜಕೀಯ ಪಕ್ಷವೊಂದು ಆಕ್ರೋಶ ವ್ಯಕ್ತಪಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚೈತ್ರಾ ಕುಂದಾಪುರ, ಶ್ರೀಕಾಂತ್‌ಗೆ ಜಾಮೀನು