ಮಹಾರಾಷ್ಟ್ರದಲ್ಲಿ
ಕೊರೊನಾ ವೈರಸ್ ನ ರೂಪಾಂತರಿ ಡೆಲ್ಟಾ ಪ್ಲಸ್ ಸೋಂಕಿಗೆ ಒಂದೇ ದಿನ ಮೂವರು ಬಲಿಯಾಗಿದ್ದಾರೆ.
ಬೃಹತ್ ಮುಂಬೈ ಕಾರ್ಪೊರೇಷನ್ ಮೂಲಗಳ ಪ್ರಕಾರ 63 ವರ್ಷದ ವೃದ್ಧೆ, 69 ವರ್ಷದ ವೃದ್ಧ ಸೇರಿದಂತೆ ಮೂವರು ಡೆಲ್ಟಾ ಪ್ಲಸ್ ಸೋಂಕಿಗೆ ಬಲಿಯಾಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ಇವರು ಸೋಂಕಿನಿಂದ ಬಳಲುತ್ತಿದ್ದರು.
ವಿಚಿತ್ರ ಅಂದರೆ ಮೃತರು ಎರಡು ಡೋಜ್ ಲಸಿಕೆ ಪಡೆದಿದ್ದರು ಮತ್ತು ಮತ್ತು ವೃದ್ಧೆಗೆ ಯಾವುದೇ ಟ್ರಾವೆಲ್ ಹಿಸ್ಟರಿ ಕೂಡ ಇರಲಿಲ್ಲ. ಆರಂಭದಲ್ಲಿ ಗಂಟಲು ಸೋಂಕು ಕಾಣಿಸಿಕೊಂಡಿದ್ದು, ನಂತರ ಕೊರೊನಾ ವೈರಸ್ ಕಾಣಿಸಿಕೊಂಡಿತ್ತು.
ಜುಲೈ 21ರಂದು ವೃದ್ಧೆಗೆ ಕೊರೊನಾ ವೈರಸ್ ಕಾಣಿಸಿಕೊಂಡಿದ್ದು, ಜುಲೈ 27ರಂದು ಮೃತಪಟ್ಟರು. ಇದೆ ವೇಳೆ ಮತ್ತೆ ನಾಲ್ವರಲ್ಲಿ ಡೆಲ್ಟಾ ಪ್ಲಸ್ ಸೋಂಕು ದೃಢಪಟ್ಟಿದ್ದು, ಅವರ ಮೇಲೆ ನಿಗಾ ವಹಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.