Publish Date: Wed, 11 Aug 2021 (17:41 IST)
Updated Date: Wed, 11 Aug 2021 (17:44 IST)
ರಾಜಧಾನಿಯಲ್ಲಿ ವ್ಯಾಕ್ಸಿನ್ ಗೆ ಅಭಾವ ಶುರುವಾಗಿದೆ.ಯಾವುದೇ ವ್ಯಾಕ್ಸಿನ್ ಸೆಂಟರ್ ನೋಡಿದರೆ ಲಸಿಕೆ ಲಭ್ಯವಿಲ್ಲ ಅನ್ನುವ ಬೋರ್ಡ್ ಹಾಕಿದ್ದಾರೆ. ಇದ್ದರಿಂದಾಗಿ ಜನಸಾಮಾನ್ಯರು ನಿತ್ಯ ಲಸಿಕೆಗಾಗಿ ಪರದಾಡುವಂತೆಯಾಗಿದೆ.
ಬೆಂಗಳೂರಿನ ನಗರದ ಕೆಸಿ ಜನರಲ್ ನ ಕೋವಿಡ್ ಕೇರ್ ಸೆಂಟರ್ ನಲ್ಲಂತೂ ನಿತ್ಯವು ಜನವೋ ಜನ. ರಸ್ತೆ ಉದ್ದಕ್ಕೂ ಜನರು ಸಾಲುಗಟ್ಟಿ ನಿಂತಿರುತ್ತಾರೆ. ಆದರೂ ಲಸಿಕೆ ಮಾತ್ರ
ಸಿಗುವುದಿಲ್ಲ. ಕೆಲವರಿಗೆ ಅಂದ್ರೆ ದಿನಕ್ಕೆ 50 ರಿಂದ 60 ಜನರಿಗೆ ಮಾತ್ರ ಲಸಿಕೆ ಲಭ್ಯವಾಗುತ್ತೆ. ಇನ್ನು ಉಳಿದವರಿಗೆ ನಾಳೆ ಬಾ ಅಂತಾ ಹೇಳಿ ಕಳಿಸುತ್ತಾರೆ. ಅಷ್ಟೇ ಅಲ್ಲದೇ ವ್ಯಾಕ್ಸಿನ್ ಇನ್ನೂ ಬಂದಿಲ್ಲ.
ಕೋವ್ಯಾಕ್ಸಿನ್ ಲಭ್ಯವಿಲ್ಲ. ಔಟ್ ಆಫ್ ಸ್ಟಾಕ್ ಅಂತಾ ಬೋರ್ಡ್ ಬೇರೆ ಹಾಕಿರುತ್ತಾರೆ. ಜೊತೆಗೆ ಕೆಲವೊಂದಿಷ್ಟು ಜನರಿಗೆ ಹಿಂಬದಿಯಿಂದ ಹಣ ಇಸ್ಕೊಂಡು ಲಸಿಕೆ ಹಾಕುತ್ತಾರೆ ಎಂಬ ವದಂತಿ ಕೇಳಿಬರುತ್ತಿದೆ. ಅಷ್ಟೇ ಅಲ್ಲದೇ ಜನರು ವ್ಯಾಕ್ಸಿನ್ ಸಿಗದೇ ನಿತ್ಯ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
Geetha
Publish Date: Wed, 11 Aug 2021 (17:41 IST)
Updated Date: Wed, 11 Aug 2021 (17:44 IST)