Select Your Language

Notifications

webdunia
webdunia
webdunia
webdunia

ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧ: ಬೆಂಗಳೂರು ಜಿಲ್ಲಾಧಿಕಾರಿ ಆದೇಶ

benghaluru
bengaluru , ಬುಧವಾರ, 11 ಆಗಸ್ಟ್ 2021 (17:12 IST)
ಶ್ರಾವಣ ಶುರುವಾಯ್ತು ನಗರದಲ್ಲಿ ಹಬ್ಬ- ಹರಿದಿನಗಳು ಪೂಜೆ ಜೋರಿರುತ್ತೆ. ಆದರೆ ಈ ಬಾರಿ ಹಬ್ಬಗಳನ್ನ ಅತ್ಯಂತ ಸರಳವಾಗಿ ಆಚರಿಸುವಂತೆ ಜೊತೆಗೆ ದೇವಸ್ಥಾನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡದಂತೆ ಸರ್ಕಾರ ನಿಷೇಧಾಜ್ಞೆ ಹೊರಡಿಸಿದೆ.
ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಕೊರೊನಾ ಮೂರನೇ ಅಲೆಯ ಮುನ್ಸೂಚನೆ ದೊರೆತಿರುವ ಹಿನ್ನೆಲೆಯಲ್ಲಿ ಮಂಗಳವಾರ ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿ ಮಂಜುನಾ
ಥ್,  ಇದೇ ಶನಿವಾರ ಭಾನುವಾರದಂದು ಭಕ್ತಾಧಿಗಳು ದೇವಸ್ಥಾನಗಳಿಗೆ ಭೇಟಿ ನೀಡದಂತೆ ಆದೇಶ ಹೊರಡಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಹೊರಡಿಸಿದ ಆದೇಶದ ಪ್ರಕಾರ ಸಾರ್ವಜನಿಕ ರಜೆ ದಿನಗಳಲ್ಲೂ ದೇವಸ್ಥಾನಗಳಿಗೆ ಭೇಟಿ ನೀಡಬಾರದೆಂದು ಆದೇಶ ನೀಡಿದ್ದು, ಇದು ನಗರದ ಎಲ್ಲಾ ದೇವಸ್ಥಾನಗಳಿಗೂ ಅನ್ವಯವಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿಮಾಚಲ ಪ್ರದೇಶದಲ್ಲಿ ಭೂಕುಸಿತ: 2 ಸಾವು, 10 ಮಂದಿ ರಕ್ಷಣೆ