Select Your Language

Notifications

webdunia
webdunia
webdunia
webdunia

ರಾಜಧಾನಿಯಲ್ಲಿ ಲಸಿಕೆ ಕೊರತೆ: ಜನಸಾಮಾನ್ಯರ ಪರದಾಟ

karnatka
bengaluru , ಬುಧವಾರ, 11 ಆಗಸ್ಟ್ 2021 (17:41 IST)
ರಾಜಧಾನಿಯಲ್ಲಿ ವ್ಯಾಕ್ಸಿನ್ ಗೆ ಅಭಾವ ಶುರುವಾಗಿದೆ.ಯಾವುದೇ ವ್ಯಾಕ್ಸಿನ್ ಸೆಂಟರ್ ನೋಡಿದರೆ ಲಸಿಕೆ ಲಭ್ಯವಿಲ್ಲ ಅನ್ನುವ  ಬೋರ್ಡ್ ಹಾಕಿದ್ದಾರೆ. ಇದ್ದರಿಂದಾಗಿ ಜನಸಾಮಾನ್ಯರು ನಿತ್ಯ ಲಸಿಕೆಗಾಗಿ ಪರದಾಡುವಂತೆಯಾಗಿದೆ.
ಬೆಂಗಳೂರಿನ ನಗರದ ಕೆಸಿ ಜನರಲ್ ನ ಕೋವಿಡ್ ಕೇರ್ ಸೆಂಟರ್ ನಲ್ಲಂತೂ ನಿತ್ಯವು ಜನವೋ ಜನ. ರಸ್ತೆ ಉದ್ದಕ್ಕೂ ಜನರು ಸಾಲುಗಟ್ಟಿ ನಿಂತಿರುತ್ತಾರೆ. ಆದರೂ ಲಸಿಕೆ ಮಾತ್ರ
ಸಿಗುವುದಿಲ್ಲ. ಕೆಲವರಿಗೆ ಅಂದ್ರೆ ದಿನಕ್ಕೆ 50 ರಿಂದ 60 ಜನರಿಗೆ ಮಾತ್ರ ಲಸಿಕೆ ಲಭ್ಯವಾಗುತ್ತೆ. ಇನ್ನು ಉಳಿದವರಿಗೆ ನಾಳೆ ಬಾ ಅಂತಾ ಹೇಳಿ ಕಳಿಸುತ್ತಾರೆ.‌ ಅಷ್ಟೇ ಅಲ್ಲದೇ ವ್ಯಾಕ್ಸಿನ್ ಇನ್ನೂ ಬಂದಿಲ್ಲ.
ಕೋವ್ಯಾಕ್ಸಿನ್ ಲಭ್ಯವಿಲ್ಲ. ಔಟ್ ಆಫ್ ಸ್ಟಾಕ್ ಅಂತಾ ಬೋರ್ಡ್ ಬೇರೆ ಹಾಕಿರುತ್ತಾರೆ. ಜೊತೆಗೆ ಕೆಲವೊಂದಿಷ್ಟು ಜನರಿಗೆ ಹಿಂಬದಿಯಿಂದ ಹಣ ಇಸ್ಕೊಂಡು ಲಸಿಕೆ ಹಾಕುತ್ತಾರೆ ಎಂಬ ವದಂತಿ ಕೇಳಿಬರುತ್ತಿದೆ. ಅಷ್ಟೇ ಅಲ್ಲದೇ ಜನರು ವ್ಯಾಕ್ಸಿನ್ ಸಿಗದೇ ನಿತ್ಯ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧ: ಬೆಂಗಳೂರು ಜಿಲ್ಲಾಧಿಕಾರಿ ಆದೇಶ