Publish Date: Fri, 13 Aug 2021 (17:28 IST)
Updated Date: Fri, 13 Aug 2021 (17:31 IST)
ನಾನು ರಾಜೀನಾಮೆ ನೀಡುತ್ತೇನೆ ಎಂಬುದು ಊಹಾಪೋಹ. ನಾನು ಸಿಎಂ ಬೊಮ್ಮಾಯಿ ಅವರ ಜೊತೆ ಖಾತೆ ಹಂಚಿಕೆ ಕುರಿತು ಮಾತನಾಡಿದ್ದು, ಅವರ ನಿರ್ಧಾರವನ್ನು
ಕಾದು ನೋಡುತ್ತೇನೆ ಎಂದು ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಬೆಂಗಳೂರಿನಿಂದ ವಿಜಯನಗರದ ವೇಣುಗೋಪಲ ದೇವಸ್ಥಾನಕ್ಕೆ ಶುಕ್ರವಾರ ಆಗಮಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್ 15ರ ಸ್ವಾತಂತ್ರೋತ್ಸವದಲ್ಲಿ ದ್ವಜಾರೋಹಣ ನೆರವೇರಿಸುವೆ. ವಿಜಯನಗರ ಜಿಲ್ಲೆಯಲ್ಲಿ ಪ್ರಥಮ ಭಾರಿಗೆ ಧ್ವಜಾರೋಹಣ ಮಾಡುವ ಅವಕಾಶ ನನಗೆ ಸಿಕ್ಕಿದೆ. ಹೀಗಾಗಿ ಅದು ನನ್ನ ಸುಯೋಗವೆಂದು ಭಾವಿಸುವೆ ಎಂದರು.
ನಾನು ದೇಹಲಿಗೆ ಹೋಗುತ್ತೆನೆ. ರಾಜೀನಾಮೆ ನೀಡುತ್ತೇವೆ ಎಂಬುದು ಉಹಾಪೋಹ. ಯಡಿಯೂರಪ್ಪ ಮತ್ತು ಸಿ.ಎಂ ಭೊಮ್ಮಾಯಿ ಜೊತೆ ಮಾತುಕತೆ ನಡೆಸಿದ್ದೇನೆ. ನನಗೆ ಯಡಿಯೂರಪ್ಪ ಬಳಿ ಹೇಳುವುದು ಏನಿಲ್ಲ. ನಾನು ವರಿಷ್ಠರನ್ನ ಭೇಟಿಯಾಗುತ್ತೆನೆಂದು ಹೇಳಿಯೇ ಇಲ್ಲ ಎಂದು ಪುನರುಚ್ಚರಿಸಿದರು.
ನಾನು ಪಕ್ಷದಲ್ಲಿಯೆ ಇರುತ್ತೇನೆ, ಹಿರಿಯರ ಮಾತಿಗೆ ಗೌರವ ಕೊಡುತ್ತೇನೆ. ಧ್ವಜಾರೋಹಣ ನಂತರ ನಾನು ಬೆಂಗಳೂರಿಗೆ ಹೋಗುತ್ತೇನೆ. ಖಾತೆ ವಿಚಾರವಾಗಿ ಏನೆ ಚರ್ಚೆ ಮಾಡಿದರೂ ಬೊಮ್ಮಾಯಿ ಬಳಿಯೆ ಮಾಡುತ್ತೇನೆ. ನನ್ನ ಮನವಿಯನ್ನ ತಲುಪಸಿಬೇಕಾದವರಿಗೆ ತಲುಪಿಸಿದ್ದೇನೆ. ಬೊಮ್ಮಾಯಿಯವರು ಈ ಬಗ್ಗೆ ಪರಿಶೀಲಿಸಿ ತಿಳಿಸಲಿದ್ದಾರೆ. ಅವರ ನಿರ್ಧಾರಕ್ಕೆ ಕಾದಿರುವೆ ಎಂದು ಅವರು ಸ್ಪಷ್ಟಪಡಿಸಿದರು.