ದೆಹಲಿ: ಡೆಲ್ಲಿ ಮೆಟ್ರೊದ ಪ್ರಯಾಣಿಕರು ಜಮಾ ಮಸೀದಿ ನಿಲ್ದಾಣದಲ್ಲಿ ಎಕ್ಸಿಟ್ ಗೇಟ್ ಹಾರುವ ವಿಡಿಯೋವೊಂದು ವೈರಲ್ ಆಗಿದ್ದು ಸಾಕಷ್ಟು ಚರ್ಚೆಯೂ ಆಗುತ್ತಿದೆ.
ಮೆಟ್ರೊ ರೈಲಿನಲ್ಲಿ ಪ್ರಯಾಣಿಸಿದ ಬಳಿಕ ಹೊರಗಡೆ ಬರಬೇಕಾದರೆ ಟಿಕೆಟ್ ಇರಲೇಬೇಕು. ಟಿಕೆಟ್ ಎಕ್ಸಿಟ್ ಗೇಟ್ ನ ಸ್ಕ್ಯಾನರ್ ಗೆ ಹಾಕಿದರೆ ಮಾತ್ರ ಬಾಗಿಲುಗಳು ತೆರೆಯುತ್ತವೆ. ನಾವೂ ಹೊರಗೆ ಬರಬಹುದು. ಎಲ್ಲಾ ಕಡೆ ಮೆಟ್ರೊದಲ್ಲಿ ಇದೇ ವ್ಯವಸ್ಥೆಯಿದೆ.
ಆದರೆ ದೆಹಲಿಯಲ್ಲಿ ಈ ಮೆಟ್ರೊ ನಿಲ್ದಾಣದಲ್ಲಿ ಎಕ್ಸಿಟ್ ಗೇಟ್ ನ ಮೇಲೆ ಹಾರಿ ಹಲವು ಪ್ರಯಾಣಿಕರು ಹೊರಗೆ ಬಂದಿದ್ದಾರೆ. ಇವರಲ್ಲಿ ಬಹುತೇಕ ಮಂದಿ ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಬರುವವರು ಎನಿಸುತ್ತಿದೆ.
ಇದಕ್ಕೆ ನೆಟ್ಟಿಗರಿಂದ ಸಾಕಷ್ಟು ಕಾಮೆಂಟ್ ಗಳು ಬರುತ್ತಿವೆ. ಅಧಿಕಾರಿಗಳ ಪ್ರಕಾರ ಎರಡು ರೈಲುಗಳು ಏಕಕಾಲಕ್ಕೆ ಬಂದ ಕಾರಣ ತೀರಾ ರಶ್ ಆಗಿದೆ. ಹೀಗಾಗಿ ನೂಕುನುಗ್ಗಲು ಉಂಟಾಗಿದ್ದು ಪ್ರಯಾಣಿಕರು ಎಕ್ಸಿಟ್ ಗೇಟ್ ಪಕ್ಕದ ಗೇಟ್ ನಲ್ಲೂ ಹೋಗಲು ಅವಕಾಶ ನೀಡಲಾಗಿದೆ ಎಂದಿದ್ದಾರೆ. ಆದರೆ ಎಕ್ಸಿಟ್ ಗೇಟ್ ಹಾರಿ ಬರುತ್ತಿರುವವರನ್ನು ನೋಡಿ ನೆಟ್ಟಿಗರು ಇವರು ನಿಜವಾಗಿಯೂ ಟಿಕೆಟ್ ಖರೀದಿ ಮಾಡಿದವರೇ ಎಂದು ಪ್ರಶ್ನೆ ಮಾಡಿದ್ದಾರೆ.