Select Your Language

Notifications

webdunia
webdunia
webdunia
webdunia

ಕೊನೆಯ ಕ್ಷಣದಲ್ಲಿ ಫೀನಿಕ್ಸ್‌ನಂತೆ ಎದ್ದು ಜಯಭೇರಿ ಬಾರಿಸಿದ ದೆಹಲಿಯ ಮುಖ್ಯಮಂತ್ರಿ ಅತಿಶಿ

Delhi Chief Minister Atishi

Sampriya

ನವದೆಹಲಿ , ಶನಿವಾರ, 8 ಫೆಬ್ರವರಿ 2025 (13:30 IST)
Photo Courtesy X
ನವದೆಹಲಿ: ನವದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಅಂತಿಮ ಹಂತ ತಲುಪಿದೆ. ಎಎಪಿ ಸೋಲಿನ ಮಧ್ಯೆಯೂ ದೆಹಲಿಯ ಮುಖ್ಯಮಂತ್ರಿಯಾಗಿರುವ ಅತಿಶಿ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ಅವರನ್ನು ಸೋಲಿಸಿ ಗೆಲುವು ಕಂಡಿದ್ದಾರೆ.

ಅತಿಶಿ ಸ್ಪರ್ಧಿಸಿದ್ದ ಕಲ್ಕಾಜಿ ವಿಧಾನಸಭಾ ಕ್ಷೇತ್ರದಲ್ಲಿ ಬರೋಬ್ಬರಿ 32 ವರ್ಷಗಳಿಂದ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಈ ಕ್ಷೇತ್ರದ ಕಡೆಗೆ ಬಿಜೆಪಿ ಹೈಕಮಾಂಡ್ ಹೆಚ್ಚು ಗಮನ ಹರಿಸಿತ್ತು. ಕಲ್ಕಾಜಿ 2025ರ ವಿಧಾನಸಭಾ ಚುನಾವಣೆಯಲ್ಲಿ ಅತ್ಯಂತ ಪೈಪೋಟಿಯಿಂದ ಕೂಡಿದ್ದ ಮತ್ತು ಕುತೂಹಲ ಕೆರಳಿಸಿದ್ದ ಸ್ಥಾನಗಳಲ್ಲಿ ಒಂದಾಗಿತ್ತು. 1993ರ ಬಳಿಕ ಕಲ್ಕಾಜಿ ಕ್ಷೇತ್ರದಲ್ಲಿ ಒಮ್ಮೆಯೂ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ.

ದೆಹಲಿಯ ಪ್ರಸ್ತುತ ಮುಖ್ಯಮಂತ್ರಿ ಅತಿಶಿ ಮರ್ಲೇನಾ ಸಿಂಗ್ 3,500 ಮತಗಳ ಅಂತರದಿಂದ  ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ವಿರುದ್ಧ ಗೆಲುವು ಸಾಧಿಸಿದ್ದಾರೆ.  ಮೊದಲ ಹಲವು ಸುತ್ತಿನಲ್ಲಿ ಹಿನ್ನಡೆ ಕಂಡಿದ್ದ ಅತಿಶಿ ಕೊನೆಯ ಕ್ಷಣದಲ್ಲಿ ಅಲ್ಪ ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಕಲ್ಕಾಜಿ ಕ್ಷೇತ್ರದ ದಾಖಲೆಯನ್ನು ನೋಡಿದರೆ, ಅತಿಶಿ ಕಳೆದ 2020ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದರು. ಅದಕ್ಕೂ ಮೊದಲು, ಆಪ್ ಅಭ್ಯರ್ಥಿ ಅವತಾರ್ ಸಿಂಗ್ ಈ ಕ್ಷೇತ್ರವನ್ನು ಗೆದ್ದಿದ್ದರು. 2013ರಲ್ಲಿ ಹರ್ಮೀತ್ ಸಿಂಗ್ ಕಲ್ಕಾ ಶಿರೋಮಣಿ ಅಕಾಲಿ ದಳದಿಂದ ಗೆದ್ದಿದ್ದರು. 1998ರಿಂದ 2008ರವರೆಗೆ ಈ ಸ್ಥಾನವನ್ನು ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ಚೋಪ್ರಾ ತಮ್ಮದಾಗಿಸಿಕೊಂಡಿದ್ದರು.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿಯಾಗಿದ್ದ ಅರವಿಂದ್ ಕೇಜ್ರಿವಾಲ್ ಜೈಲು ಸೇರಿದ್ದರು. ಬಳಿಕ 2024ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಅವರು ಅಚ್ಚರಿಯ ನಿರ್ಧಾರ ತೆಗೆದುಕೊಂಡು, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದಾದ ಬಳಿಕ 2024ರ ಸೆಪ್ಟೆಂಬರ್ 21ರಂದು ಅತಿಶಿ ದೆಹಲಿಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

ವಿಧಾನಸಭಾ ಚುನಾವಣೆಯವರೆಗೆ ಮಾತ್ರ ನಾನು ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಪ್ರಮಾಣವಚನ ಸ್ವೀಕಾರದ ಸಂದರ್ಭದಲ್ಲೇ ಅತಿಶಿ ಘೋಷಿಸಿದ್ದರು. ಹೀಗಾಗಿ, ಆಮ್ ಆದ್ಮಿ ಪಕ್ಷದಿಂದ ಅರವಿಂದ್ ಕೇಜ್ರಿವಾಲ್ ಅವರೇ ಈ ಬಾರಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಾರಾಯಿಯಿಂದಲೇ ದೆಹಲಿಯಲ್ಲಿ ಅರವಿಂದ್‌ ಕೇಜ್ರಿವಾಲ್‌ಗೆ ಸೋಲು ಎಂದ ಅಣ್ಣಾ ಹಜಾರೆ