Select Your Language

Notifications

webdunia
webdunia
webdunia
webdunia

ನಿತ್ಯ 5 ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಸಿ : ಕರ್ನಾಟಕಕ್ಕೆ CWRC ಆದೇಶ

ನಿತ್ಯ 5 ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಸಿ  : ಕರ್ನಾಟಕಕ್ಕೆ CWRC ಆದೇಶ
ನವದೆಹಲಿ , ಮಂಗಳವಾರ, 29 ಆಗಸ್ಟ್ 2023 (10:21 IST)
ನವದೆಹಲಿ : ರಾಜ್ಯದ ಕಾವೇರಿ ಅಚ್ಚುಕಟ್ಟು ಜಲಾಶಯಗಳಿಂದ ಮುಂದಿನ ಹದಿನೈದು ದಿನಗಳ ಕಾಲ ನಿತ್ಯ 5 ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಕರ್ನಾಟಕಕ್ಕೆ ಆದೇಶ ಮಾಡಿದೆ.

ಇಂದು ವರ್ಚ್ಯುವಲ್ ಸಭೆ ನಡೆಸಿದ ಸಮಿತಿ ಅಧ್ಯಕ್ಷರು ಮಳೆ ಪ್ರಮಾಣ, ಜಲಾಶಯಗಳಿಗೆ ನೀರಿನ ಸಂಗ್ರಹದ ಬಗ್ಗೆ ಮಾಹಿತಿ ಪಡೆದರು. ಸಭೆಯಲ್ಲಿ ಮಳೆಯ ಕೊರತೆಯ ಪ್ರಮಾಣ ಸರಿಯಾಗಿ ಲೆಕ್ಕ ಹಾಕಬೇಕು. ಮುಂದಿನ ಹತ್ತು ದಿನಗಳ ಕಾಲ 24,000 ಕ್ಯೂಸೆಕ್ ನೀರು ಹರಿಸಲು ತಮಿಳುನಾಡು ಒತ್ತಾಯಿಸಿತು.  

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕರ್ನಾಟಕ ಒಳ ಹರಿವು ಇಲ್ಲದ ಕಾರಣ ನೀರು ಬಿಡಲು ಸಾಧ್ಯವಿಲ್ಲ, ತಮಿಳುನಾಡು ನೀರಾವರಿಗೆ ನೀರು ಹರಿಸಿ ಕಾವೇರಿ ಜಲಾಶಯಗಳು ಬರಿದಾಗುತ್ತಿವೆ ಎಂದು ಆಕ್ಷೇಪ ವ್ಯಕ್ತಪಡಿಸಿತು.

ಮಧ್ಯಪ್ರವೇಶ ಮಾಡಿದ ಸಮಿತಿ ಅಧ್ಯಕ್ಷರು ತಮಿಳುನಾಡಿನ 10 ದಿನಗಳ ಕಾಲ 24,000 ಕ್ಯೂಸೆಕ್ ಹರಿಸುವ ಬೇಡಿಕೆ ಬದಲು 7,200 ಕ್ಯೂಸೆಕ್ ಹರಿಸಲು ಹೇಳಿತು. ಇದಕ್ಕೂ ಕರ್ನಾಟಕ ಒಪ್ಪದಾಗ 5,000 ಕ್ಯೂಸೆಕ್ ಹದಿನೈದು ದಿನಗಳ ಕಾಲ ಬಿಡಲು ಶಿಫಾರಸು ಮಾಡಿತು.


Share this Story:

Follow Webdunia kannada

ಮುಂದಿನ ಸುದ್ದಿ

ಸ್ವಂತ ತಾಯಿಯನ್ನು ಕೊಲೆಗೈದು ಹಾಯಾಗಿ ತೋಟದಲ್ಲಿ ಮಲಗಿದ್ದ ಮಗ! ಕೊಲೆಗೆ ಕಾರಣ ತಿಳಿಯಿರಿ