Select Your Language

Notifications

webdunia
webdunia
webdunia
webdunia

ತಮಿಳುನಾಡಿಗೆ ಮತ್ತಷ್ಟು ನೀರು : ಕುಸಿದ ಕೆಆರ್ಎಸ್ ಡ್ಯಾಂ ನೀರಿನ ಮಟ್ಟ

ತಮಿಳುನಾಡಿಗೆ ಮತ್ತಷ್ಟು ನೀರು : ಕುಸಿದ ಕೆಆರ್ಎಸ್ ಡ್ಯಾಂ ನೀರಿನ ಮಟ್ಟ
ಮಂಡ್ಯ , ಸೋಮವಾರ, 21 ಆಗಸ್ಟ್ 2023 (11:28 IST)
ಮಂಡ್ಯ : ಕೆಆರ್ಎಸ್ ಡ್ಯಾಂನಿಂದ ತಮಿಳುನಾಡಿಗೆ ನೀರನ್ನು ಕಳೆದ ಹಲವು ದಿನಗಳಿಂದ ನಿರಂತರವಾಗಿ ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಇದೀಗ ಕೆಆರ್ಎಸ್ ಡ್ಯಾಂನ ನೀರಿನ ಮಟ್ಟ 105 ಅಡಿಗೆ ಕುಸಿತ ಕಂಡಿದೆ. ನೀರಿನ ಮಟ್ಟ ದಿನೇ ದಿನೇ ಕುಸಿಯುತ್ತಿದ್ದರೂ ರಾಜ್ಯ ಸರ್ಕಾರ ಮಾತ್ರ ಕೈಕಟ್ಟಿ ಕುಳಿತಿದೆ.

ಕೆಆರ್ಎಸ್ ಡ್ಯಾಂನಲ್ಲಿ ನೀರಿನ ಪ್ರಮಾಣ ಕುಸಿಯುತ್ತಿರುವುದರಿಂದ ಕಾವೇರಿ ಕೊಳ್ಳದ ರೈತರಲ್ಲಿ ಕಾವೇರಿ ಒಡಲು ಬರಿದಾಗುವ ಆತಂಕ ಮೂಡಿದೆ. ರಾಜ್ಯ ಸರ್ಕಾರ ಅನ್ನದಾತರ ಮಾತಿಗೂ ಕ್ಯಾರೆ ಎನ್ನದ ಹಿನ್ನೆಲೆ ಮಂಡ್ಯ, ಮೈಸೂರು, ಚಾಮರಾಜನಗರ ಸೇರಿ ಹಲವೆಡೆ ಪ್ರತಿಭಟನೆ ಮುಂದುವರಿದಿದೆ. ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.

ಈ ಹೋರಾಟದ ನಡುವೆಯೂ ಇಂದು ಕೂಡಾ ತಮಿಳುನಾಡಿಗೆ 12,631 ಕ್ಯೂಸೆಕ್ ನೀರು ಬಿಡುಗಡೆಯಾಗುತ್ತಿದೆ. ಡ್ಯಾಂನಿಂದ ಒಟ್ಟಾರೆ 15,247 ಕ್ಯೂಸೆಕ್ ಹೊರಹರಿವಿದೆ. ಅಷ್ಟಾಗಿ ಒಳಹರಿವು ಪ್ರಮಾಣ ಏರಿಕೆ ಕಾಣಿಸುತ್ತಿಲ್ಲ. ಕೆಆರ್ಎಸ್ ಡ್ಯಾಂಗೆ ಕೇವಲ 4,983 ಕ್ಯೂಸೆಕ್ ನೀರು ಮಾತ್ರವೇ ಹರಿದು ಬರುತ್ತಿದೆ.
 
ಇಂದಿನ ನೀರಿನ ಮಟ್ಟ


ಗರಿಷ್ಠ ಮಟ್ಟ – 124.80 ಅಡಿಗಳು
ಇಂದಿನ ಮಟ್ಟ – 105.70 ಅಡಿಗಳು
ಗರಿಷ್ಠ ಸಾಂದ್ರತೆ – 49.452 ಟಿಎಂಸಿ
ಇಂದಿನ ಸಾಂದ್ರತೆ – 27.617 ಟಿಎಂಸಿ
ಒಳ ಹರಿವು – 4983 ಕ್ಯೂಸೆಕ್
ಹೊರ ಹರಿವು – 15,247 ಕ್ಯೂಸೆಕ್


Share this Story:

Follow Webdunia kannada

ಮುಂದಿನ ಸುದ್ದಿ

ಗ್ರಾಮೀಣ ಪ್ರದೇಶದ ಜನರಿಗೂ ಉಚಿತ ಆರೋಗ್ಯ ಸೇವೆ ಒದಗಿಸಲು ಕಾರ್ಯಕ್ರಮ : ದಿನೇಶ್ ಗುಂಡೂರಾವ್