Select Your Language

Notifications

webdunia
webdunia
webdunia
webdunia

ಕೆಆರ್ಎಸ್ ಡ್ಯಾಂನಿಂದ ತಮಿಳುನಾಡಿಗೆ ಹೆಚ್ಚಿನ ನೀರು ಬಿಡುಗಡೆ

ಕೆಆರ್ಎಸ್ ಡ್ಯಾಂ
ಮಂಡ್ಯ : ಕಾವೇರಿ ನೀರಿಗಾಗಿ ತಮಿಳುನಾಡು ಸುಪ್ರೀಂ ಕೋರ್ಟ್ ಮೊರೆ ಹೋದ ಬೆನ್ನಲ್ಲೇ ಕೆಆರ್ಎಸ್ ಡ್ಯಾಂನಿಂದ ಹೆಚ್ಚಿನ ನೀರನ್ನು ಬಿಡುಗಡೆ ಮಾಡಲಾಗಿದೆ. ಸೋಮವಾರ ಕೆಆರ್ಎಸ್ ಡ್ಯಾಂನಿಂದ 5,243 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿತ್ತು. ಇಂದು 8,590 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.

ಜೂನ್ ಹಾಗೂ ಜುಲೈನ 28.84 ಟಿಎಂಸಿ ನೀರು ಬಿಡಿಸುವಂತೆ ಸುಪ್ರೀಂ ಕೋರ್ಟ್ಗೆ ತಮಿಳುನಾಡು ಅರ್ಜಿ ಸಲ್ಲಿಸಿತ್ತು. ಅರ್ಜಿಯ ಬೆನ್ನಲ್ಲೇ ಕಾವೇರಿ ನೀರಾವರಿ ನಿಗಮ ನೀರು ಬಿಡುಗಡೆ ಮಾಡಿದೆ.

ಗರಿಷ್ಠ ಮಟ್ಟ – 124.80 ಅಡಿಗಳು
ಇಂದಿನ ಮಟ್ಟ – 111.80 ಅಡಿಗಳು
ಗರಿಷ್ಠ ಸಾಂದ್ರತೆ – 49.452 ಟಿಎಂಸಿ
ಇಂದಿನ ಸಾಂದ್ರತೆ – 33.570 ಟಿಎಂಸಿ
ಒಳಹರಿವು – 4,753 ಕ್ಯೂಸೆಕ್
ಹೊರಹರಿವು – 10,956 ಕ್ಯೂಸೆಕ್


Share this Story:

Follow Webdunia kannada

ಮುಂದಿನ ಸುದ್ದಿ

ಟೊಮೆಟೋ ಆಯ್ತು, ಈಗ ಮಾರುಕಟ್ಟೆಯಲ್ಲಿ ಈರುಳ್ಳಿಯದೇ ಕಾರುಬಾರು!