Select Your Language

Notifications

webdunia
webdunia
webdunia
webdunia

ವ್ಯಾಕ್ಸಿನ್ ವಿತರಣೆಯಲ್ಲಿ ಈಗ ಭಾರತ ಅಮೆರಿಕಕ್ಕಿಂತಲೂ ಮುಂದೆ

ಕೊರೋನಾ ವ್ಯಾಕ್ಸಿನ್
ನವದೆಹಲಿ , ಮಂಗಳವಾರ, 29 ಜೂನ್ 2021 (07:56 IST)
ನವದೆಹಲಿ: ದೇಶದಲ್ಲಿ ಕೊರೋನಾ ಎರಡನೇ ಅಲೆ ಕಡಿಮೆಯಾಗುತ್ತಿರುವ ಬೆನ್ನಲ್ಲೇ ಮೂರನೇ ಅಲೆಗೆ ಸಿದ್ಧತೆ ನಡೆದಿದೆ. ಇದಕ್ಕೂ ಮೊದಲು ಸರ್ಕಾರ ವ್ಯಾಕ್ಸಿನ್ ನೀಡುವ ಕೆಲಸವನ್ನು ಭರದಿಂದ ಮಾಡುತ್ತಿದೆ.


ಇತ್ತೀಚೆಗೆ ಒಂದೇ ದಿನದಲ್ಲಿ 80 ಲಕ್ಷ ಡೋಸ್ ಲಸಿಕೆ ನೀಡಿ ದಾಖಲೆ ಮಾಡಿದ್ದ ಭಾರತ ಈಗ ಒಟ್ಟಾರೆ ಲಸಿಕೆ ನೀಡಿದ ಪಟ್ಟಿಯಲ್ಲಿ ಅಮೆರಿಕಾಕ್ಕಿಂತಲೂ ಮುಂದೆ ಬಂದಿದೆ.

ಆರೋಗ್ಯ ಇಲಾಖೆ ಪ್ರಕಾರ ಇದುವರೆಗೆ 32,36,63,297  ಜನರಿಗೆ ಲಸಿಕೆ ನೀಡಿಯಾಗಿದೆ. ಈ ಮೂಲಕ ಜಾಗತಿಕವಾಗಿ ಅಮೆರಿಕಾ ದೇಶವನ್ನೂ ಹಿಂದಿಕ್ಕಿದೆ. ಇದೀಗ ಕೊರೋನಾ ಕೂಡಾ ನಿಯಂತ್ರಣಕ್ಕೆ ಬಂದಿದ್ದು, ಮುಂದಿನ ದಿನಗಳಲ್ಲಿ ತ್ವರಿತಗತಿಯಲ್ಲಿ ಲಸಿಕೆ ಪೂರೈಸಿ ಮೂರನೇ ಅಲೆ ಬಾರದಂತೆ ತಡೆಗಟ್ಟುವುದೇ ಸರ್ಕಾರದ ಉದ್ದೇಶವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ರಮೇಶ್ ಜಾರಕಿಹೊಳಿ ಮುಂಬೈಗೆ