ನಿರ್ಮಲಾ ಸೀತಾರಾಮ್ ಗೆ ನಿರ್ಬಲ ಸೀತಾರಾಮ್ ಎಂದು ಲೇವಡಿ ಮಾಡಿದ ಕಾಂಗ್ರೆಸ್. ಕಾರಣವೇನು ಗೊತ್ತಾ?

ಮಂಗಳವಾರ, 3 ಡಿಸೆಂಬರ್ 2019 (06:58 IST)
ನವದೆಹಲಿ : ಭಾರತದ ಆರ್ಥಿಕತೆ ವಿಚಾರದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಬಿಜೆಪಿಯವರು ಬಿಡದ ಕಾರಣ ಕಾಂಗ್ರೆಸ್ ನಾಯಕರು ಅವರನನ್ನು ನಿರ್ಬಲ ಸೀತಾರಾಮನ್ ಎಂದು ಲೇವಡಿ ಮಾಡಿದ್ದಾರೆ.ಸೋಮವಾರದ ನಡೆದ ಲೋಕಸಭಾ ಅಧಿವೇಶನದಲ್ಲಿ ತೆರಿಗೆ ಕಾನೂನು  ಮಸೂದೆಯ ಬಗ್ಗೆ ಚರ್ಚೆ ನಡೆಯುತ್ತಿದ್ದ ವೇಳೆ ಮಾತನಾಡಿದ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ನಿರ್ಬಲ ಸೀತಾರಾಮನ್ ಎಂದು ಕರೆದು ಲೇವಡಿ ಮಾಡಿದ್ದಾರೆ.


ಬಿಜೆಪಿ ಸರ್ಕಾರದ ಹಲವು ದೂರದರ್ಶಿ ಯೋಜನೆಗಳು ಆರ್ಥಿಕತೆಯ ನಿಧಾನಗತಿಗೆ ಕಾರಣವಾಗಿದೆ. ಹೀಗಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ನಿರ್ಬಲ ಸೀತಾರಾಮನ್ ಎಂದು ಕರೆಯದೇ ಬೇರೆ ದಾರಿಯಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅಪ್ರಾಪ್ತ ಬಾಲಕಿಯನ್ನು ದನದ ಕೊಟ್ಟಿಗೆಗೆ ಎಳೆದೊಯ್ದು ಅತ್ಯಾಚಾರ ಎಸಗಿದ ಕಾಮುಕ