Select Your Language

Notifications

webdunia
webdunia
webdunia
webdunia

ಅಪ್ರಾಪ್ತ ಬಾಲಕಿಯನ್ನು ದನದ ಕೊಟ್ಟಿಗೆಗೆ ಎಳೆದೊಯ್ದು ಅತ್ಯಾಚಾರ ಎಸಗಿದ ಕಾಮುಕ

ಅಪ್ರಾಪ್ತ ಬಾಲಕಿಯನ್ನು ದನದ ಕೊಟ್ಟಿಗೆಗೆ ಎಳೆದೊಯ್ದು  ಅತ್ಯಾಚಾರ ಎಸಗಿದ ಕಾಮುಕ
ದಾವಣಗೆರೆ , ಮಂಗಳವಾರ, 3 ಡಿಸೆಂಬರ್ 2019 (06:55 IST)
ದಾವಣಗೆರೆ : ಮನೆಯಲ್ಲಿ ಒಬ್ಬಳೆ ಆಟವಾಡುತ್ತಿದ್ದ 8 ವರ್ಷದಬಾಲಕಿಯನ್ನು ಕಾಮುಕನೊಬ್ಬ ದನದ ಕೊಟ್ಟಿಗೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.



ರಂಜನ್ (23) ಅತ್ಯಾಚಾರ ಎಸಗಿದ ಆರೋಪಿಯಾಗಿದ್ದು, ಸೋಮವಾರ ಸಂಜೆ ಶಾಲೆ ಬಿಟ್ಟು ಮನೆಗೆ ಬಂದ 2ನೇ ತರಗತಿಯ ಬಾಲಕಿ ಮನೆಯ ಹೊರಗೆ ಒಬ್ಬಳೆ ಆಟವಾಡುತ್ತಿದ್ದಾಗ, ಯಾರು ಇಲ್ಲದನ್ನು ಗಮನಿಸಿದ ರಂಜನ್ ಆಕೆಯನ್ನು ದನದ ಕೊಟ್ಟಿಗೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಈ ವಿಚಾರ ಯಾರಿಗಾದರೂ ಹೇಳಿದರೆ ತಾಯಿಗೆ ಹೊಡೆಯುವುದಾಗಿ ಬೆದರಿಕೆ ಹಾಕಿದ್ದಾನೆ.


ಆದರೆ ಬಾಲಕಿ ಈ ವಿಚಾರವನ್ನು ತಾಯಿಗೆ ತಿಳಿಸಿದ್ದು, ತಾಯಿ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಇಡ್ಲಿ ಕೊಡಿಸುವುದಾಗಿ ಹೇಳಿ 5 ವರ್ಷದ ಬಾಲಕಿಯನ್ನು ರೇಪ್ ಮಾಡಿದ ವಿವಾಹಿತ