Publish Date: Thu, 12 Feb 2026 (10:15 IST)
Updated Date: Thu, 12 Feb 2026 (10:19 IST)
ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ವಿವಾದ ಮತ್ತೆ ಭುಗಿಲೆದ್ದಿರುವಾಗಲೇ ಕಾಂಗ್ರೆಸ್ ಶಾಸಕರು ವಿದೇಶ ಪ್ರವಾಸಕ್ಕೆ ಹೊರಟಿರುವುದು ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದೆ.
ಕಳೆದ ಒಂದು ವಾರದಿಂದ ಮತ್ತೆ ಸಿಎಂ ಬದಲಾವಣೆ ವಿಚಾರವಾಗಿ ಕಾಂಗ್ರೆಸ್ ನಲ್ಲಿ ತಿಕ್ಕಾಟ ಶುರುವಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗುತ್ತಿದ್ದಾರೆ. ಇದರ ನಡುವೆ ಕಾಂಗ್ರೆಸ್ ಶಾಸಕರು ವಿದೇಶ ಪ್ರವಾಸಕ್ಕೆ ಹೊರಟಿದ್ದಾರೆ.
ಕಾಂಗ್ರೆಸ್ ಶಾಸಕರು ಮೇಲ್ನೋಟಕ್ಕೆ ಅಧ್ಯಯನ ಪ್ರವಾಸಕ್ಕೆ ಹೊರಟಿದ್ದಾರೆ ಎನ್ನಲಾಗುತ್ತಿದೆಯಾದರೂ ಇದು ಖಾಸಗಿ ಪ್ರವಾಸವೆಂದು ಅನುಮಾನ ಮೂಡಿದೆ. ಈ ವಿಚಾರ ಹೈಕಮಾಂಡ್ ಗಮನಕ್ಕೆ ಬಂದಿದ್ದು ನಾಯಕರಿಂದ ವರದಿ ಕೇಳಿದೆ.
ರಾಜ್ಯದಲ್ಲಿ ನಾಯಕತ್ವ ವಿವಾದ ಚರ್ಚೆಯಲ್ಲಿರುವಾಗಲೇ ಈ ಶಾಸಕರು ವಿದೇಶ ಪ್ರವಾಸ ಮಾಡುವುದು ಬೇರೆಯದೇ ಸಂದೇಶ ನೀಡಿದಂತಾಗುತ್ತದೆ ಎಂದು ಹೈಕಮಾಂಡ್ ಎಚ್ಚರಿಕೆ ನೀಡಿದೆ. ಅಷ್ಟಕ್ಕೂ ಈಗ ಫಾರಿನ್ ಟೂರ್ ಮಾಡುವ ಅಗತ್ಯವಾದರೂ ಏನಿದೆ ಎಂಬ ಸಂಶಯ ಮೂಡಿಸಿದೆ.
ಸಿದ್ದರಾಮಯ್ಯ ಆಪ್ತ ಸಚಿವ ವೆಂಕಟೇಶ್, ಶಾಸಕ ಪುಟ್ಟರಂಗಶೆಟ್ಟಿ, ಅನಿಲ್ ಚಿಕ್ಕಮಾದು,ರಾಘವೇಂದ್ರ ಹಿಟ್ನಾಳ್, ಬಿಎಂ ನಾಗರಾಜು, ಜೆಟಿ ಪಾಟೀಲ್, ಅಲ್ಲಮಪ್ರಭು ಪಾಟೀಲ್ ಮುಂತಾದ ಶಾಸಕರು ವಿದೇಶ ಪ್ರವಾಸ ಮಾಡುವ ನಾಯಕರ ಪಟ್ಟಿಯಲ್ಲಿದ್ದಾರೆ.
Krishnaveni K
Publish Date: Thu, 12 Feb 2026 (10:15 IST)
Updated Date: Thu, 12 Feb 2026 (10:19 IST)