Daily Horoscope

Select Your Language

Notifications

webdunia
webdunia
webdunia
webdunia

ಡಿಕೆ ಸುರೇಶ್ ಹೇಳಿಕೆಗೆ ಪ್ರತಿಕ್ರಿಯೆ ಕೇಳುತ್ತಿದ್ದ ಹಾಗೇ ಸಿಟ್ಟಾದ ಸಿಎಂ ಸಿದ್ದರಾಮಯ್ಯ

Siddaramaiah
ಬೆಂಗಳೂರು: ಅಧಿಕಾರ ಹಂಚಿಕೆ ವಿಚಾರದಲ್ಲಿ ನಾನು ಹಾಗೂ ಡಿಕೆ ಶಿವಕುಮಾರ್ ಅವರು ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಸಿಎಂ ಸಿದ್ದರಾಮಯ್ಯ  ಹೇಳಿದರು. 

ʻಸಿಎಂ ಸಿದ್ದರಾಮಯ್ಯ ಕುರ್ಚಿ ಬಿಟ್ಟು ಕೊಡ್ತಾರೆ ಎಂಬ ವಿಶ್ವಾಸ ಇದೆʼ ಅನ್ನೋ ಡಿಕೆ ಸುರೇಶ್  ಹೇಳಿಕೆ ಸಂಬಂಧ ಮಾಧ್ಯಮದವರು ಪ್ರಶ್ನೆ ಕೇಳಿದಾಗ ಸಿಟ್ಟಾದ ಸಿದ್ದರಾಮಯ್ಯನವರು,  ಅದನ್ನ ಬಿಟ್ಟು ಬೇರೆ ಏನು ಕೇಳೋಕೆ ಬರಲ್ವಾ ನಿಮಗೆ? ಇನ್ನೇನು ಕೇಳೋದೆ ಇಲ್ಲವಲ್ಲ. 3 ತಿಂಗಳು ಆಯ್ತು ಇದನ್ನ ನೀವು ಶುರು ಮಾಡಿ. ಇನ್ನು ಮೇಲೆ ಇದನ್ನ ಕೇಳಬೇಡಿ ದಯಮಾಡಿ ಎಂದು ಸಿಟ್ಟಾದರು. 

ಎಲ್ಲವೂ ತಿಳಿದಿರುವ ಹೈಕಮಾಂಡ್ ಅವರು ಎಲ್ಲವನ್ನ ತೀರ್ಮಾನ ಮಾಡ್ತಾರೆ. ಹೈಕಮಾಂಡ್ ಏನ್ ತೀರ್ಮಾನ ಮಾಡುತ್ತೋ ಅದರಂತೆ ನಡೆದುಕೊಳ್ಳೋನು ನಾನು. ಇದನ್ನ ಎಷ್ಟು ಸಾರಿ ಹೇಳೋದು ನಿಮಗೆ. ಯಾರು ಕೇಳೋಕೆ ಹೋಗಬೇಡಿ ಇನ್ನು. ಹೈಕಮಾಂಡ್ ತೀರ್ಮಾನದಂತೆ ನಡೆದುಕೊಳ್ಳೋದು. ಹೈಕಮಾಂಡ್ ಹೇಳಿದಂತೆ ನಾನು ನಡೆದುಕೊಳ್ಳಬೇಕು, ಡಿಕೆ ಶಿವಕುಮಾರ್ ಕೂಡಾ ನಡೆದುಕೊಳ್ಳಬೇಕು ಅದು ಬಿಟ್ಟು ಬೇರೆ ಏನು ಕೇಳೋದೇ ಇಲ್ಲವಾ ಎಂದು ಅಕ್ರೋಶ ಹೊರಹಾಕಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ನೀವು ಭಾರತವನ್ನು ಮಾರಿದ್ದೀರಿ. ನಿನಗೆ ನಾಚಿಕೆಯಾಗುವುದಿಲ್ಲವೇ: ರಾಹುಲ್ ಗಾಂಧಿ ಕಿಡಿ