Publish Date: Sat, 23 Jun 2018 (11:55 IST)
Updated Date: Sat, 23 Jun 2018 (11:58 IST)
ನವದೆಹಲಿ: ಕಾಶ್ಮೀರದಲ್ಲಿ ಉಗ್ರರಿಗಿಂತ ಹೆಚ್ಚು ಭಾರತೀಯ ಸೈನಿಕರು ನಾಗರಿಕರನ್ನೇ ಕೊಲ್ಲುತ್ತಿದೆ ಎಂದು ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದ ಕಾಂಗ್ರೆಸ್ ನಾಯಕರಿಗೆ ಬಿಜೆಪಿ ತಪರಾಕಿ ನೀಡಿದೆ.
ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಭಾರತೀಯ ಸೈನಿಕರಿಗೆ ಮೇಲಿನಂತೆ ಹೇಳಿಕೆ ನೀಡಿದ್ದರು. ಇನ್ನು, ಇನ್ನೊಬ್ಬ ನಾಯಕ ಸೈಫುದ್ದೀನ್ ಸೋಜ್ ಕಾಶ್ಮೀರ ಜನತೆ ಸ್ವಾತಂತ್ರ್ಯ ಬಯಸುತ್ತಿದ್ದಾರೆ ಎಂದಿದ್ದರು.
ಈ ಇಬ್ಬರು ನಾಯಕರ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಹೇಳಿಕೆ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ. ಅಲ್ಲದೆ, ಕಾಂಗ್ರೆಸ್ ಯಾವತ್ತೂ ದೇಶ ವಿಭಜಕರ ಜತೆಗೇ ಇರುತ್ತದೆ ಎನ್ನುವುದಕ್ಕೆ ಗುಲಾಂ ನಬಿ ಹೇಳಿಕೆಯೇ ಸಾಕ್ಷಿ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಟೀಕಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.