Publish Date: Sun, 10 Nov 2019 (11:06 IST)
Updated Date: Sun, 10 Nov 2019 (11:07 IST)
ನವದೆಹಲಿ : ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ನಾಯಕರೊಬ್ಬರು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಕಿಂಗ್ ಆಫ್ ಹಾರ್ಟ್ ಎಂದು ಹಾಡಿ ಹೊಗಳಿದ್ದಾರೆ.
ಕಾಂಗ್ರೆಸ್ ಶಾಸಕ ನವಜೋತ್ ಸಿಂಗ್ ಸಿಧು, ಪಾಕಿಸ್ತಾನದ ಗಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಕಿಂಗ್ ಆಫ್ ಹಾರ್ಟ್, ನಿಮಗೆ ಧನ್ಯವಾದಗಳು. ಸಿಕಂದರ್(ಅಲೆಕ್ಸಾಂಡರ್) ಭಯದಿಂದ ಜಗತ್ತನ್ನು ಗೆದ್ದರೆ, ನೀವು ಪ್ರಪಂಚದಾದ್ಯಂತ ಹೃದಯಗಳನ್ನು ಗೆದ್ದಿದ್ದೀರಿ ಎಂದು ಹಾಡಿ ಹೊಗಳಿದ್ದಾರೆ.
ಇದೇ ವೇಳೆ ಪ್ರಧಾನಿ ಮೋದಿಯವರ ಬಗ್ಗೆ ಮೆಚ್ಚುಗೆ ಮಾತನಾಡಿದ ಅವರು, ಕರ್ತಾರ್ ಪುರ ಕಾರಿಡಾರ್ ಯೋಜನೆ ಸ್ಥಾಪಿಸಿ, ಸಿಖ್ಖರಿಗೆ ದರ್ಬಾರ್ ಸಾಹಿಬ್ ಪ್ರವೇಶಿಸಲು ಸಹಾಯ ಮಾಡಿದ್ದಕ್ಕಾಗಿ ಧನ್ಯವಾದ ತಿಳಿಸಿದ್ದಾರೆ.