Select Your Language

Notifications

webdunia
webdunia
webdunia
webdunia

ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿಮೀರುತ್ತಿರುವ ಹಿನ್ನಲೆ; ಪಂಜಾಬ್ ನಲ್ಲಿ 84 ರೈತರ ಬಂಧನ

webdunia
ಶುಕ್ರವಾರ, 8 ನವೆಂಬರ್ 2019 (09:10 IST)
ನವದೆಹಲಿ : ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿಮೀರುತ್ತಿರುವ ಹಿನ್ನಲೆಯಲ್ಲಿ ಇದೀಗ ಪಂಜಾಬ್ ನಲ್ಲಿ 84 ರೈತರನ್ನು ಬಂಧಿಸಲಾಗಿದೆ.
ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿಮೀರುತ್ತಿದ್ದು, ಈ ಬಗ್ಗೆ ಸುಪ್ರೀಂಕೋರ್ಟ್ ಅ‍ಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೇ , ಹರ್ಯಾಣ, ಪಂಜಾಬ್, ಉತ್ತರ ಪ್ರದೇಶದಲ್ಲಿ ರೈತರು ಕೃಷಿ ತ್ಯಾಜ್ಯ ಸುಡದಂತೆ ಸೂಚನೆ ನೀಡಿತ್ತು.


ಆದರೆ ಕಾನೂನನ್ನು ಉಲ್ಲಂಘಿಸಿ ರೈತರು ಕೃಷಿ ತ್ಯಾಜ್ಯವನ್ನು ಸುಡುತ್ತಿದ್ದಾರೆ. ಇದರಿಂದ ಕೃಷಿ ತ್ಯಾಜ್ಯದ ವಿಷಕಾರಿ ಹೊಗೆ ಕಾರ್ಖಾನೆ ಹಾಗೂ ವಾಹನಗಳ ಸೇರಿ ದೆಹಲಿಯ ವಾಯುಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಈ ಹಿನ್ನಲೆಯಲ್ಲಿ ಕೃಷಿ ತ್ಯಾಜ್ಯ ಸುಟ್ಟ 84 ಕ್ಕೂ ಹೆಚ್ಚು ರೈತರನ್ನು ಬಂಧಿಸಿದ್ದು, 174 ರೈತರ ವಿರುದ್ಧ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.


Share this Story:

Follow Webdunia Hindi

ಮುಂದಿನ ಸುದ್ದಿ

ಪ್ರತಿಭಟನೆ ನಿರತ ವೈದ್ಯರಿಗೆ ಆರೋಗ್ಯ ಸಚಿವರಿಂದ ಖಡಕ್ ಸೂಚನೆ