Select Your Language

Notifications

webdunia
webdunia
webdunia
webdunia

ಪ್ಲಾಸ್ಟಿಕ್ ಮುಕ್ತ ತಮಿಳುನಾಡನ್ನು ನಿರ್ಮಾಣ ಮಾಡಲು ಹೊರಟ ಸಿಎಂ ಪಳನಿಸ್ವಾಮಿ

ಪ್ಲಾಸ್ಟಿಕ್ ಮುಕ್ತ ತಮಿಳುನಾಡನ್ನು ನಿರ್ಮಾಣ ಮಾಡಲು ಹೊರಟ ಸಿಎಂ ಪಳನಿಸ್ವಾಮಿ
ಚೆನ್ನೈ , ಬುಧವಾರ, 6 ಜೂನ್ 2018 (14:38 IST)
ಚೆನ್ನೈ : ತಮಿಳುನಾಡನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ಸಿಎಂ ಪಳನಿಸ್ವಾಮಿ ಅವರು ನಿರ್ಧರಿಸಿದ್ದು, ಈ ಮೂಲಕ ಅವರು ತಮಿಳುನಾಡಿನಲ್ಲಿ ಜನವರಿ 1, 2019 ರಿಂದ ಸಂಪೂರ್ಣವಾಗಿ ಪ್ಲಾಸ್ಟಿಕ್ ಬಂದ್ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.


ಈ ಬಗ್ಗೆ ರಾಜ್ಯ ವಿಧಾನಸಭೆಯಲ್ಲಿ ಮಾತನಾಡಿದ ಅವರು ' ಪ್ಲಾಸ್ಟಿಕ್ ಬಳಕೆಯಿಂದ ರೋಗಗಳು ಹೆಚ್ಚಾಗುತ್ತಿದೆ. ದಿನಬಳಕೆ ವಸ್ತುಗಳ ಪ್ಯಾಕಿಂಗ್ ವ್ಯವಸ್ಥೆಯಲ್ಲಿ ಹೆಚ್ಚಿನ ಪ್ರಮಾಣದ ಪ್ಲಾಸ್ಟಿಕ್ ಬಳಸಲಾಗುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಇದಕ್ಕೆ ಬ್ರೇಕ್ ಬೀಳಲಿದೆ. ಮಾಜಿ ಮುಖ್ಯಮಂತ್ರಿ ದಿ, ಜಯಲಲಿತಾ ಅವರು ಈ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದರು. ಅವರ ಆಶಯದಂತೆ ಪ್ಲಾಸ್ಟಿಕ್ ಕಪ್, ಪ್ಲೇಟ್, ಔಷಧೋಪಕರಣಗಳಿಗೆ ಬಳಕೆ ಮಾಡುವ ಪ್ಲಾಸ್ಟಿಕ್ ಮೇಲೆ ನಿಷೇಧ ಹೇರಲಾಗುವುದು ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ ಬಿಹಾರದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್