Select Your Language

Notifications

webdunia
webdunia
webdunia
webdunia

ತಿರುಪತಿ ದೇವಾಲಯ ಹಿಂದೂಗಳಿಗೆ ಸೇರಿದ್ದು: ತಿರುಪತಿಯಲ್ಲಿ ಇನ್ಮೇಲೆ ಎಲ್ಲಾ ಚೇಂಜ್ ಮಾಡ್ತೀನಿ ಎಂದ ಚಂದ್ರಬಾಬು ನಾಯ್ಡು

Chandrababu Naidu

Krishnaveni K

ತಿರುಮಲ , ಗುರುವಾರ, 13 ಜೂನ್ 2024 (14:39 IST)
ತಿರುಮಲ: ತಿರುಪತಿ ದೇವಾಲಯ ಹಿಂದೂಗಳಿಗೆ ಸೇರಿದ್ದು. ಇಲ್ಲಿ ಇಷ್ಟು ದಿನ ನಡೆಯುತ್ತಿದ್ದ ಎಲ್ಲಾ ಭ್ರಷ್ಟಾಚಾರಗಳಿಗೂ ಕೊನೆ ಹಾಡುತ್ತೇನೆ ಎಂದು ಆಂಧ್ರ ಪ್ರದೇಶ ನೂತನ ಸಿಎಂ ಚಂದ್ರಬಾಬು ನಾಯ್ಡು ಗುಡುಗಿದ್ದಾರೆ.

ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ನಿನ್ನೆಯಷ್ಟೇ ಪ್ರಮಾಣ ವಚನ ಸ್ವೀಕರಿಸಿದ ಚಂದ್ರಬಾಬು ನಾಯ್ಡು ಇಂದು ಕುಟುಂಬ ಸಮೇತರಾಗಿ ತಿರುಪತಿಗೆ ಭೇಟಿ ನೀಡಿದ್ದಾರೆ. ಈ ವೇಳೆ ತಿರುಪತಿ ಆಡಳಿತ ಮಂಡಳಿಯಿಂದಲೇ ‘ಸ್ವಚ್ಛತಾ’ ಕೆಲಸ ಶುರು ಮಾಡಬೇಕಿದೆ ಎಂದಿದ್ದಾರೆ.

‘ತಿರುಪತಿ ಆಡಳಿತ ಮಂಡಳಿಯಿಂದಲೇ ಭ್ರಷ್ಟಾಚಾರ ನಿರ್ಮೂಲನೆ ಶುರು ಮಾಡಲಿದ್ದೇವೆ. ತಿರುಪತಿ ಹಿಂದೂಗಳಿಗೆ ಸೇರಿದ್ದು. ಇದರ ರಕ್ಷಣೆಗೆ ನಾನು ಸದಾ ಬದ್ಧ. ಇನ್ಮುಂದೆ ತಿರುಪತಿಯಲ್ಲಿ ಕೇವಲ ಗೋವಿಂದ ಗೋವಿಂದ ಎನ್ನುವ ಮಂತ್ರ ಮಾತ್ರ ಕೇಳಬೇಕು’ ಎಂದು ಚಂದ್ರಬಾಬು ನಾಯ್ಡು ಖಡಕ್ ಆಗಿ ಹೇಳಿದ್ದಾರೆ.

ಅಲ್ಲದೆ, ಆಂಧ್ರಪ್ರದೇಶವನ್ನು ದೇಶದಲ್ಲೇ ನಂ.1 ರಾಜ್ಯವಾಗಿ ಮಾಡುವುದು ನನ್ನ ಗುರಿ. ಇನ್ಮುಂದೆ ಭ್ರಷ್ಟಾಚಾರ, ಅನ್ಯಾಯಗಳಿಗೆ ನಮ್ಮಲ್ಲಿ ಜಾಗವಿರಲ್ಲ ಎಂದಿದ್ದಾರೆ. ತಿರುಪತಿಗೆ ಭೇಟಿ ನೀಡಿದ ಬಳಿಕ ಅವರು ಅಧಿಕೃತವಾಗಿ ಸಿಎಂ ಕಾರ್ಯಾಲಯಕ್ಕೆ ತೆರಳಿ ಅಧಿಕಾರ ಸ್ವೀಕರಿಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಅರೆಸ್ಟ್: ರೇಣುಕಾಸ್ವಾಮಿ ಮರಣೋತ್ತರ ವರದಿಯಲ್ಲಿದೆ ಶಾಕಿಂಗ್ ವಿಚಾರಗಳು