Select Your Language

Notifications

webdunia
webdunia
webdunia
webdunia

ಸರ್ಕಾರ ನೀಡುವ ಸಂಬಳದ ಒಂದು ರೂಪಾಯಿಯನ್ನು ಬಿಟ್ಟುಕೊಡಲ್ಲ: ಪವನ್‌ ಕಲ್ಯಾಣ್

ಸರ್ಕಾರ ನೀಡುವ ಸಂಬಳದ ಒಂದು ರೂಪಾಯಿಯನ್ನು ಬಿಟ್ಟುಕೊಡಲ್ಲ: ಪವನ್‌ ಕಲ್ಯಾಣ್

sampriya

ಬೆಂಗಳೂರು , ಸೋಮವಾರ, 10 ಜೂನ್ 2024 (15:51 IST)
Photo By X
ಬೆಂಗಳೂರು: ಪವನ್ ಕಲ್ಯಾಣ್ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದು, ಶೀಘ್ರದಲ್ಲೇ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆಂಧ್ರಪ್ರದೇಶದಲ್ಲಿ ಪ್ರತಿ ಶಾಸಕರು ಮಾಸಿಕ ವೇತನವಾಗಿ ಅಂದಾಜು 1.5 ಲಕ್ಷ ರೂ ಹಣ ಪಡೆಯುತ್ತಾರೆ.

ಕೆಲವು ಉನ್ನತ ಮಟ್ಟದಲ್ಲಿರುವ ನಾಯಕರು ಸಾಮಾನ್ಯವಾಗಿ  ಸಂಬಳವನ್ನು ಸ್ವೀಕರಿಸದೆ, ತಮಗೆ ಬರುವ ಸಂಬಳವನ್ನು ಸಮಾಜದ ಏಳಿಗೆಗಾಗಿ ಬಳಸುತ್ತಾರೆ. ಇನ್ನೂ ಕೆಲವು ನಾಯಕರಿಗೆ ಅವರ ತಿಂಗಳ ಸಂಬಳ ದಿನದ ಪ್ರಯಾಣ ವೆಚ್ಚಕ್ಕೂ ಸಾಕಾವುದಿಲ್ಲ. ವಿಷಯ ಏನೆಂದರೆ  ಪವನ್ ಕಲ್ಯಾಣ್ ಅವರು ತಮ್ಮ ಸಂಪೂರ್ಣ ಸಂಭಾವನೆ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ನಾನು ಸಾರ್ವಜನಿಕರ ತೆರಿಗೆ ಹಣವನ್ನು ಸಂಭಾವನೆಯಾಗಿ ಪಡೆಯುತ್ತಿದ್ದೇನೆ ಅನ್ನೋದು ನನಗೆ ನೆನಪಾಗುತ್ತಿರಬೇಕು. ನಾನು ಖರ್ಚು ಮಾಡುವ ಪ್ರತಿ ರೂಪಾಯಿಗೂ ನಾನು ಜವಾಬ್ದಾರನಾಗಿರಲು ಬಯಸುತ್ತೇನೆ. ಹೀಗಾಗಿ ಪೂರ್ತಿ ಸಂಭಾವನೆ ಪಡೆಯುತ್ತೇನೆ. ಅವರ ಹಣವನ್ನು ಬಳಸಿದ್ದಕ್ಕಾಗಿ ನನ್ನನ್ನು ಜನರು ಪ್ರಶ್ನಿಸಬೇಕೆಂದು ನಾನು ಬಯಸುತ್ತೇನೆ’ ಎಂದಿದ್ದಾರೆ.

‘ಜವಾಬ್ದಾರಿಯುತ ಸರ್ಕಾರ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತೋರಿಸಲು ನಾನು ಬಯಸುತ್ತೇನೆ. ನಾನು ಆ ಬದಲಾವಣೆಯನ್ನು ತರಬೇಕಿದೆ. ನಿಜವಾದ ಶಾಸಕರು ಹೇಗೆ ಇರುತ್ತಾರೆ ಮತ್ತು ನಿಜವಾದ ನಾಯಕರಾಗುವುದು ಹೇಗೆ ಎಂಬುದನ್ನು ತೋರಿಸಬೇಕಿದೆ’ ಎಂದಿದ್ದಾರೆ ಪವನ್ ಕಲ್ಯಾಣ್.

ಚಿತ್ರಕ್ಕಾಗಿ ಪವನ್ ಕಲ್ಯಾಣ್ 70 ಕೋಟಿ ರೂ. ಚುನಾವಣಾ ಅಫಿಡವಿಟ್‌ನಲ್ಲಿ ಅವರು ಅಪಾರ ಆಸ್ತಿ ಮತ್ತು ಆದಾಯವನ್ನು ಘೋಷಿಸಿದ್ದಾರೆ. ಪವನ್ ಕಲ್ಯಾಣ್ ಅವರು ಪಿಠಾಪುರಂನಿಂದ ಶಾಸಕರಾಗಿ ಆಯ್ಕೆಯಾದರು ಮತ್ತು ಜನಸೇನಾ ಪಕ್ಷದ ಅಧ್ಯಕ್ಷರಾಗಿ ಅವರು ತಮ್ಮ ಪಕ್ಷದ ಟಿಕೆಟ್‌ನಲ್ಲಿ ಗೆದ್ದ ಎಲ್ಲಾ 20 ಶಾಸಕರ ಅಭ್ಯರ್ಥಿಗಳೊಂದಿಗೆ ಸಂವಾದ ನಡೆಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಎಸ್‌ಐಟಿ ಕಸ್ಟಡಿ ಮುಕ್ತಾಯ: ಪರಪ್ಪನ ಅಗ್ರಹಾರ ಜೈಲಿಗೆ ಪ್ರಜ್ವಲ್‌ ರೇವಣ್ಣ ಸ್ಥಳಾಂತರ