Select Your Language

Notifications

webdunia
webdunia
webdunia
webdunia

ಕೇರಳದ 'ಚಮಯವಿಳಕ್ಕು' ಉತ್ಸವದಲ್ಲಿ ಕಾಲ್ತುಳಿತ: ಐದು ವರ್ಷದ ಬಾಲಕಿ ಸಾವು

stampede

Sampriya

ಕೇರಳ , ಸೋಮವಾರ, 25 ಮಾರ್ಚ್ 2024 (15:38 IST)
Photo Courtesy
ಕೇರಳ:  ಇಲ್ಲಿನ ಕೊಲ್ಲಂ ಜಿಲ್ಲೆಯ ಕೊಟ್ಟನ್‌ಕುಲಂಗರ ದೇವಿ ದೇವಸ್ಥಾನದ 'ಚಮಯವಿಳಕ್ಕು' ಉತ್ಸವದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಐದು ವರ್ಷದ ಬಾಲಕಿ ಗಾಯಗೊಂಡು ಸಾವನ್ನಪ್ಪಿದ್ದಾಳೆ.

ನಿನ್ನೆ ರಾತ್ರಿ ನಡೆದ  ರಥೋತ್ಸವದ ವೇಳೆ ಮೃತ ಬಾಲಕಿ ತನ್ನ ತಂದೆಯ  ತೋಳಿನಿಂದ ಕೆಳಗಡೆ ಬಿದ್ದದ್ದಾಳೆ. ಈ ವೇಳೆ ಕಾಲ್ತುಳಿತಕ್ಕೆ ಒಳಗಾಗಿ ಗಂಭೀರ ಗಾಯಗೊಂಡಿದ್ದಳು.

ಕೂಡಲೇ ಮಗುವನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಮೃತ ಬಾಲಕಿಯನ್ನು ರಮೇಶ್‌ ಹಾಗೂ ಜಿಜಿ ಪುತ್ರಿ ಎಂದು ಗುರುತಿಸಲಾಗಿದೆ. ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ರಾಜ್ಯದ ಕೊಚ್ಚಿಯಲ್ಲಿರುವ ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದಲ್ಲಿ (ಕುಸಾಟ್) ಉತ್ಸವದಲ್ಲಿ ನೂಕುನುಗ್ಗಲು ಉಂಟಾಗಿ ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟು ಸುಮಾರು 60 ವಿದ್ಯಾರ್ಥಿಗಳು ಗಾಯಗೊಂಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಜನಾರ್ದನ ರೆಡ್ಡಿ ಅಗ್ನಿ ಪರೀಕ್ಷೆ ಗೆದ್ದು ಮತ್ತೇ ತವರು ಮನೆಗೆ ವಾಪಾಸ್ಸಾಗಿದ್ದಾರೆ: ಬಿ.ಶ್ರೀರಾಮುಲು