Select Your Language

Notifications

webdunia
webdunia
webdunia
webdunia

ಸಮಾರಂಭದಲ್ಲಿ ಕಾಲ್ತುಳಿತಕ್ಕೆ ಮಹಿಳೆ, ಮಕ್ಕಳು ಸೇರಿದಂತೆ 85 ಮಂದಿ ಸಾವು!

ಸಮಾರಂಭದಲ್ಲಿ  ಕಾಲ್ತುಳಿತಕ್ಕೆ ಮಹಿಳೆ, ಮಕ್ಕಳು ಸೇರಿದಂತೆ 85 ಮಂದಿ ಸಾವು!
ಯೆಮೆನ್ , ಶನಿವಾರ, 22 ಏಪ್ರಿಲ್ 2023 (08:57 IST)
ಸನಾ : ನೆರವು ನೀಡುವ ಸಮಾರಂಭದಲ್ಲಿ ನಡೆದ ಕಾಲ್ತುಳಿತದಲ್ಲಿ 85 ಮಂದಿ ಸಾವನ್ನಪ್ಪಿದ ಘಟನೆ ಯೆಮೆನ್ನಲ್ಲಿ ನಡೆದಿದೆ.

ಯೆಮೆನ್ ರಾಜಧಾನಿ ಸನಾದ ಬಾಬ್ ಅಲ್-ಯೆಮೆನ್ ಜಿಲ್ಲೆಯ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ರಂಜಾನ್ ನಿಮಿತ್ತ ಶಾಲೆಯಲ್ಲಿ ಬಡಜನರಿಗೆ ನೆರವು ನೀಡಲು ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಒಬ್ಬರಿಗೆ 5,000 ಯೆಮೆನಿ ರಿತಾಲ್ಸ್ (1,600 ರೂ), ಬಟ್ಟೆ, ಆಹಾರ ಸೇರಿ ಇನ್ನಿತರೆ ನೆರವನ್ನು ನೀಡುತ್ತಿದ್ದರು.

 
ಕಾರ್ಯಕ್ರಮದಲ್ಲಿ ನೀಡಲಾದ ಸೌಲಭ್ಯವನ್ನು ಪಡೆಯಲು ಹಲವಾರು ಜನರು ಭಾಗಿಯಾಗಿದ್ದರು. ಈ ವೇಳೆ ನೂಕುನುಗ್ಗಲು ಉಂಟಾಗಿದ್ದು, ಕಾಲ್ತುಳಿತದದಲ್ಲಿ ಕನಿಷ್ಠ 85 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 322 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. 

ಸ್ಥಳೀಯ ಆಡಳಿತದ ಸಹಾಯವಿಲ್ಲದೇ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಘಟನೆಗೆ ಕಾರಣರಾದ ವಿತಕರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣೆ ಹೊತ್ತಿನಲ್ಲೇ ಶಿವಕುಮಾರ್ ಗೆ ಶಾಕ್